ಮತ ಚಲಾಯಿಸಿ ಬೇಸರ ಹೊರಹಾಕಿದ ನಟ ಅನಂತ್​ ನಾಗ್​!

Anant nag
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಜನರು ತಮ್ಮ ಹಕ್ಕನ್ನು ಚಲಾಯಿಸಲು ಕಾತುರದಿಂದ ಪೋಲಿಂಗ್​ ಸ್ಟೇಷನ್​ಗಳತ್ತ ತೆರಳುತ್ತಿದ್ದಾರೆ.

ಇತ್ತ ನಟ ಅನಂತ್​ ನಾಗ್​ ತಮ್ಮ ಮತ ಚಲಾಯಿಸಿ ಮಾತನಾಡಿದ್ದಾರೆ ಮತ್ತು ಜನರು ತಮ್ಮ ಹಕ್ಕನ್ನು ಚಲಾಯಿಸಲು ನಿರಾಸಕ್ತಿ ತೋರಿಸುತ್ತಿರುವುದಕ್ಕೆ ಬೇಸರ ಹೊರಹಾಕಿದ್ದಾರೆ.

ಬೇಸರ ಹೊರಹಾಕಿದ ನಟ

ಆರ್​ಎಂವಿ ಸೆಕೆಂಡ್​ ಸ್ಟೇಜ್​ನಲ್ಲಿ ಹಕ್ಕು ಚಲಾಯಿಸಿ ಮಾತನಾಡಿದ ನಟ ನಾನು ನನ್ನ ಮತ ಚಲಾಯಿಸಿದ್ದೇನೆ ಎಲ್ಲರೂ ತಪ್ಪದೇ ಮತದಾನ ಮಾಡಿ ಎಮದು ಕರೆ ನೀಡಿದ್ದಾರೆ.

anant nag

ಇನ್ನು ಮಾತನಾಡು ವೇಳೆ ಮತದಾನ ಪ್ರಮಾಣ ಕಡಿಮೆ ಆಗಿರುವುದಕ್ಕೆ ಬೇಸರ ಹೊರಹಾಕಿದ್ದಾರೆ ಮತ್ತು ಯುವ ಸಮೂಹದ ವಿರುದ್ಧ ಕಿಡಿಕಾರಿದ್ದಾರೆ.

ಯುವಕರಿಗೂ ಮಾಡಿಕೊಡಬೇಕೆನೋ

ಇನ್ನು ಮತದಾನಕ್ಕೆ ಯುವ ಸಮೂಹ ಅಸಡ್ಡೆ ತೋರುತ್ತಿರುವ ಕುರಿತು ಪ್ರತಿಕ್ರಿಯಿಸಿದ ನಟ ಹಿರಿಯರಿಗೆ ಮನೆಯಲ್ಲೇ ಮತ ಚಲಾವಣೆಗೆ ಅವಕಾಶ ಮಾಡಿಕೊಟ್ಟಂತೆ ಯುವಕರಿಗೂ ಮಾಡಿಕೊಡಬೇಕೆನೋ ಎಂದು ಪ್ರಶ್ನಿಸಿದ್ದಾರೆ.

ಈ ಯುವಕರಿಗೆ ಪಬ್​, ಬಾರ್​ ಎಲ್ಲಿದ್ದೆಯೋ ಅಲ್ಲಿಯೇ ವ್ಯವಸ್ಥೆ ಮಾಡಬೇಕಿತ್ತೇನೋ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net