More

  ಸರದಿ ಸಾಲಿನಲ್ಲಿ ನಿಂತು ವಾಪಸ್​ ಆದ ಮತದಾರರು; 8,000 ಸಾವಿರ ಜನರಿಗೆ ಒಂದೇ ಕೇಂದ್ರ!

  ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಜನರು ತಮ್ಮ ಹಕ್ಕನ್ನು ಚಲಾಯಿಸಲು ಕಾತುರದಿಂದ ಪೋಲಿಂಗ್​ ಸ್ಟೇಷನ್​ಗಳತ್ತ ತೆರಳುತ್ತಿದ್ದಾರೆ.

  ಇನ್ನು ಹಲವೆಡೆ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮತದಾರರು ಹಾಗು ಚುನಾವಣಾ ಅಧಿಕಾರಿಗಳ ನಡುವೆ ವಾಗ್ವಾದವೂ ಸಹ ಏರ್ಪಟ್ಟಿದೆ.

  ಕಾದು ಕಾದು ಸುಸ್ತಾದ ಜನ

  ಇನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗದೆ ವಾಪಸ್​ ತೆರಳಿದ್ದಾರೆ.

  polling station

  ಇದನ್ನೂ ಓದಿ: ಎರಡು ಬಸ್​ಗಳ ನಡುವೆ ಡಿಕ್ಕಿ; ಐವರು ಸ್ಥಳದಲ್ಲೇ ಮೃತ್ಯು

  ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡನಾಗಮಂಗಲದಲ್ಲಿ ಘಟನೆ ನಡೆದಿದ್ದು ಮತದಾರರು ಚುನಾವಣಾ ಅಧಿಕಾರಿಗಳಿಗೆ ಇಡಿ ಇಡಿ ಶಾಪ ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

  ಕ್ಯಾರೆ ಎನ್ನದ ಅಧಿಕಾರಿಗಳು

  ಇನ್ನು ದೊಡ್ಡಮಂಗಲದಲ್ಲಿ ಸುಮಾರು 8,000 ಸಾವಿರ ಮತದಾರರಿದ್ದು ಅಷ್ಟು ಜನಕ್ಕೆ ಒಂದೇ ಮತ ಕೇಂದ್ರ ಇರುವುದು ಚುನಾವಣಾಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕನ್ನಡಿಯಾಗಿದೆ.

  ಹೆಚ್ಚುವರಿ ಮತಕೇಂದ್ರ ಸ್ಥಾಪಿಸುವಂತೆ ಚುನಾವಣಾಧಿಕಾರಿಗಳಿಗೆ ಮತದಾರರು ದೂರು ನೀಡಿದ್ದರು ಸಹ ಅಧಿಕಾರಿಗಳು ಕ್ಯಾರೆ ಎನ್ನದೇ ತಮ್ಮ ಕೆಲಸದಲ್ಲಿ ತಾವು ನಿರತರಾಗಿದ್ದರು.

  ಇದನ್ನು ಕಂಡು ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರು, ಹಿರಿಯ ನಾಗರೀಕರು ಚುನಾವಣಾಧಿಕಾರಿಗಳಿಗೆ ಹಿಡಿ ಶಾಪ ಹಾಕಿ ವಾಪಸ್​ ಹೊರಟು ಹೋಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts