ಎಂ.ಎಸ್​.ಧೋನಿ ನಿವೃತ್ತಿಯ ದಿನ ಜೊಮ್ಯಾಟೋದ ಕಾಲೆಳೆದವನಿಗೆ ಆ್ಯಪ್​​ನಿಂದ ಸಿಕ್ಕಿದ್ದು ಎಪಿಕ್ ರಿಪ್ಲೈ...

Zomato
Published on

ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಭಾನುವಾರ (ಆಗಸ್ಟ್​ 15) ಘೋಷಿಸಿದ್ದಾರೆ.

ಕ್ರಿಕೆಟ್ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಲ್ಲದೆ, ನಾಯಕನಾಗಿ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸಿದ್ದ ಮಹೇಂದ್ರ ಸಿಂಗ್​ ಧೋನಿಗೆ ಖ್ಯಾತ ಫುಡ್​ ಡೆಲಿವರಿ ಸಂಸ್ಥೆ ಜೊಮ್ಯಾಟೋ ಒಂದು ವಿಶಿಷ್ಟ ರೀತಿಯಲ್ಲಿ ಗೌರವ ಸಮರ್ಪಿಸಿದೆ.

ಮಹೇಂದ್ರ ಸಿಂಗ್​ ಧೋನಿ ಅವರು ನಿವೃತ್ತರಾದ ದಿನ ಅವರ ಹುಟ್ಟೂರಾದ ರಾಂಚಿಯ ಜನರಿಗೆ ವಿಶೇಷ ವಿನಾಯಿತಿ (ಡಿಸ್​​ಕೌಂಟ್​​) ನೀಡುವುದಾಗಿ ಟ್ವಿಟರ್​ ಮೂಲಕ ತಿಳಿಸಿತ್ತು. ಅಂದರೆ ರಾಂಚಿಯ ಜನರು ಯಾರು, ಏನೇ ಆರ್ಡರ್​ ಮಾಡಿದರೂ, ಅವರಿಗೆ ವಿಶೇಷ ಡಿಸ್​ಕೌಂಟ್​ ನೀಡುತ್ತೇವೆ ಎಂದು ಹೇಳಿತ್ತು.

ಜೊಮ್ಯಾಟೋದ ಟ್ವೀಟ್​ ನೋಡಿದ ನೆಟ್ಟಿಗರು ತುಂಬ ಹೊಗಳಿದ್ದರು. ಆದರೆ ಓರ್ವ ಟ್ವಿಟರ್​ ಬಳಕೆದಾರ ಮಾತ್ರ ಸ್ವಲ್ಪ ಅಧಿಕಪ್ರಸಂಗಿತನದ ಕಾಮೆಂಟ್​ ಹಾಕಿದ್ದ. ಇದನ್ನೂ ಓದಿ: ಕಚೇರಿಯಲ್ಲಿ ಏಜೆಂಟರ್ಸ್ ಕಾಣಿಸಿಕೊಂಡ್ರೆ ಅಟ್ಟಾಡಿಸಿಕೊಂಡು ಹೊಡೆಸುವೆ; ಎಚ್​.ಡಿ. ರೇವಣ್ಣ

ಮಹೇಂದ್ರ ಸಿಂಗ್​ ಧೋನಿ ಅವರು ರಾಂಚಿಯವರೇ ಆಗಿರಬಹುದು. ಆದರೆ ಇಡೀ ಭಾರತದ ಜನರು ಅವರನ್ನು ಪ್ರೀತಿಸುತ್ತಾರೆ. ಹಾಗಾಗಿ ನೀವ್ಯಾಕೆ ರಾಂಚಿಗೆ ಮಾತ್ರ ವಿಶೇಷ ಡಿಸ್​​ಕೌಂಟ್​​ ಕೊಡಬೇಕು. ಅದನ್ನು ಇಡೀ ದೇಶಕ್ಕೇ ನೀಡಬಹುದಲ್ಲ ಎಂದು ಪ್ರಶ್ನಿಸಿದ್ದರು.

ಈ ನೆಟ್ಟಿಗನ ಕಾಮೆಂಟ್​ಗೆ ಜೊಮ್ಯಾಟೊ ಒಂದು ಅದ್ಭುತ ಪ್ರತಿಕ್ರಿಯೆ ನೀಡಿದೆ. ಜೊಮ್ಯಾಟೋದ ರಿಪ್ಲೈಗೆ ನೆಟ್ಟಿಗರು ಮನಸೋತಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಿಡಿ ಹೊತ್ತಿಸಲು ಕೇರಳದ ಗೂಂಡಾಗಳು! ಫೋನ್‌ಕಾಲ್‌ ಬಿಚ್ಚಿಡುತ್ತಿವೆ ರಹಸ್ಯ

ಇಡೀ ದೇಶಕ್ಕೆ ಓರ್ವ ಕ್ರಿಕೆಟ್​ ಲೆಜೆಂಡ್​​ನನ್ನು ಉಡುಗೊರೆ ಕೊಟ್ಟ ರಾಂಚಿಗೆ ಈಗ ನಾವು ಉಡುಗೊರೆ ಕೊಡುವ ಸಲುವಾಗಿ ಈ ಸ್ಪೆಶಲ್​ ಡಿಸ್​ಕೌಂಟ್​ ಘೋಷಿಸಿದ್ದೇವೆ ಎಂದು ಜೊಮ್ಯಾಟೋ ರಿಪ್ಲೈ ಟ್ವೀಟ್​​ನಲ್ಲಿ ಹೇಳಿದೆ. (A gift for the city that gifted India a legend!).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net