ಪೋರ್ಚುಗಲ್​ನಲ್ಲಿ ನಡೆದ ನೃತ್ಯ ವಿಶ್ವ ಕಪ್​ನಲ್ಲಿ ಬೆಂಗಳೂರಿನ ತಂಡಕ್ಕೆ ಚಿನ್ನದ ಪದಕ

Yuridhimix
Published on

ಬೆಂಗಳೂರು: ಪೋರ್ಚುಗಲ್​ನ ಪ್ರಾಗ್​ನಲ್ಲಿ ಇತ್ತೀಚೆಗೆ ನಡೆದ ನೃತ್ಯ ವಿಶ್ವ ಕಪ್​ನಲ್ಲಿ ಬೆಂಗಳೂರಿನ ತಂಡ ಚಿನ್ನದ ಪದಕ ಗಳಿಸಿದೆ. ಬೆಂಗಳೂರಿನ ಯುರಿಧಿಮಿಕ್ಸ್​ನ ಮಕ್ಕಳು ಈ ಚಿನ್ನದ ಪದಕ ಗಳಿಸಿ ಸಾಧನೆ ತೋರಿದ್ದಾರೆ.

ಪ್ರಾಗ್​ನಲ್ಲಿ ಜು. 5ರಂದು ನೃತ್ಯ ವಿಶ್ವ ಕಪ್​-2023 ನಡೆದಿದ್ದು, ಇದರಲ್ಲಿ ಬೆಂಗಳೂರಿನ ಯುರಿಧಿಮಿಕ್ಸ್​ನ ವಿದುಷಿ ಕುಮಾರಿ ಸಂಯುಕ್ತ ಶಂಕರ್ ಮತ್ತು ಶಿಷ್ಯ ವೃಂದದ ಆದ್ಯಾ ಸಚಿನ್, ಶ್ರೀಹರಿಣಿ ಅರುಣ್​ಮೋಜಿ, ಕೀರ್ತನಾ ಸೇತುಪತಿ, ಸಾಯಿಭವಾನಿ, ಸಂಜನಾ ನವೀನ್ ಭಾಗವಹಿಸಿ ಚಿನ್ನದ ಪದಕ ವಿಜೇತರಾಗಿದ್ದಾರೆ.

ವಿದುಷಿ ಸಂಯುಕ್ತ ಶಂಕರ್ ಬೆಂಗಳೂರಿನ ಸಚ್ಚಿದಾನಂದ ಆರ್ಟ್ಸ್ ಫೌಂಡೇಷನ್ ಸಂಸ್ಥಾಪಕರಾಗಿದ್ದು, ಯುರಿಧಿಮಿಕ್ಸ್​ನಲ್ಲಿ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನಲ್ಲಿ ನೃತ್ಯ ಸಂಯೋಜನೆ ಮತ್ತು ನೃತ್ಯ ತರಬೇತಿ ಪಡೆದ ಬೆಂಗಳೂರಿನ ಯುರಿಧಿಮಿಕ್ಸ್​ನ ಮಕ್ಕಳು ನೃತ್ಯ ವಿಶ್ವ ಕಪ್​ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net