ಇಬ್ಬರು ಪತ್ನಿಯರು ವಿದೇಶದಲ್ಲಿ… ಕಾಮದಾಹ ತೀರಿಸಿಕೊಳ್ಳಲು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಕಿರಾತಕ

Kerala Accused
Published on

ಕೊಚ್ಚಿ: ಇಬ್ಬರು ಪತ್ನಿಯರು ಕೆಲಸಕ್ಕೆಂದು ವಿದೇಶಕ್ಕೆ ಹೋಗಿರುವಾಗ ಇತ್ತ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉದಯಲಾಲ್​ ಘೋಷ್​ (39) ಎಂದು ಗುರುತಿಸಲಾಗಿದೆ. ಈತ ಕೇರಳದ ಮುತ್ತೋಮ್​ ಮಾಥಾಪರಾ ಕಾಲನಿಯ ನಿವಾಸಿ. ಕೃತ್ಯ ಎಸಗಿದ ಬಳಿಕ ಎರ್ನಾಕುಲಂನಲ್ಲಿ ಅವಿತು ಕುಳಿತಿದ್ದ ಆರೋಪಿಯನ್ನು ಮುತ್ತೋಮ್​ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಜನವರಿ 26ರಂದು ನಡೆದಿತ್ತು. ಆರೋಪಿಯನ್ನು ಈಗ ಬಂಧಿಸಲಾಗಿದೆ. ಬಂಧಿತ ಘೋಷ್​ ಇಡುಕಿ ಮೂಲದ ಸಂತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಪರಿಚಯವಿದೆ. ಸಂತ್ರಸ್ತೆ ನೆರೆಯ ಜಿಲ್ಲೆಯ ಬುಡಕಟ್ಟು ಹಾಸ್ಟೆಲ್​ನಲ್ಲಿ ವಾಸವಿದ್ದಳು.

ಬಾಲಕಿ ಹಾಗೂ ಆಕೆಯ ಸಂಬಂಧಿಕರು ಜನವರಿ 26ರಂದು ಮಲಂಕರ ಜಲಾಶಯಕ್ಕೆ ಭೇಟಿ ನೀಡಿದ್ದರು. ಆರೋಪಿ ಘೋಷ್​, ಬಾಲಕಿ ಹಾಗೂ ಇತರ ಇಬ್ಬರು ಮಕ್ಕಳು ಎರಡು ದೋಣಿಗಳಲ್ಲಿ ಜಲಾಶಯದ ಬಳಿಯ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಇನ್ನೆರಡು ಮಕ್ಕಳನ್ನು ವಾಪಸ್​ ಕಳುಹಿಸಿ ಆರೋಪಿ, ಸಮೀಪದ ಪೊದೆಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಘಟನೆಯ ಬಳಿಕ ಭಯದಿಂದ ಹುಡುಗಿ ಯಾರಿಗೂ ಹೇಳಿರಲಿಲ್ಲ. ಆದರೆ, ಮರುದಿನ ಹಾಸ್ಟೆಲ್ ತಲುಪಿದಾಗ ಅಧಿಕಾರಿಗಳು ಅವಳ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದರು.

ಬಳಿಕ ಅಪ್ರಾಪ್ತೆಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮುತ್ತೋಮ್​ ಮಠಪಾರ ತಲುಪಿದಾಗ ಪೊಲೀಸರು ತನ್ನನ್ನು ಹುಡುಕಿಕೊಂಡು ಬಂದಿರುವುದನ್ನು ಅರಿತ ಘೋಷ್​ ತಲೆಮರೆಸಿಕೊಂಡಿದ್ದ.

ಅಗ್ನಿಶಾಮಕ ದಳದ ಸಹಾಯದಿಂದ ಅಪ್ರಾಪ್ತೆ ದೌರ್ಜನ್ಯಕ್ಕೊಳಗಾದ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದೆ. ಆರೋಪಿಗೆ ಸೇರಿದ ದೋಣಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆ ನಡೆದ ಹಲವು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಘೋಷ್​ಗೆ ಇಬ್ಬರು ಪತ್ನಿಯರಿದ್ದಾರೆ. ಇಬ್ಬರೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಮದಾಹ ತೀರಿಸಿಕೊಳ್ಳಲು ಪರಿಚಿತ ಅಪ್ರಾಪ್ತೆ ಮೇಲೆಯೇ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುತ್ತೋಮ್​ ವೃತ್ತ ನಿರೀಕ್ಷಕ ಪ್ರಿನ್ಸ್ ಜೋಸೆಫ್, ಸನ್ ಇನ್ಸ್‌ಪೆಕ್ಟರ್ ಹಾಶಿಮ್, ಸಿಪಿಒಗಳಾದ ರಾಮ್‌ಕುಮಾರ್, ಪ್ರದೀಪ್, ಪ್ರತಾಪ್ ಮತ್ತು ಜೋಜಿ ನೇತೃತ್ವದ ತಂಡ ಎರ್ನಾಕುಲಂ ತಲುಪಿ ಆರೋಪಿಯನ್ನು ಬಂಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net