More

    ಭೋಪಾಲ್​ ಅನಿಲ ದುರಂತ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ಭಾರೀ ಹಿನ್ನಡೆ

    ನವದೆಹಲಿ: ಭೂಪಾಲ್​ ಅನಿಲ ದುರಂತ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ಭಾರೀ ಹಿನ್ನಡೆಯಾಗಿದೆ. ಯೂನಿಯನ್​ ಕಾರ್ಬೈಡ್​ ಕಂಪನಿಯಿಂದ ಹೆಚ್ಚು ಪರಿಹಾರ ಬರಬೇಕೆಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದೆ.

    1984ರಲ್ಲಿ ನಡೆದ ಅನಿಲ ದುರಂತದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.

    ಕೇಂದ್ರ ಸರ್ಕಾರವು ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿ, ಪ್ರಕರಣವನ್ನು ಮತ್ತೆ ತೆರೆಯಬೇಕು ಮತ್ತು ಅನಿಲ ಸೋರಿಕೆ ದುರಂತದ ಸಂತ್ರಸ್ತರಿಗೆ 7,844 ಕೋಟಿ ರೂ. ಮೌಲ್ಯದ ಹೆಚ್ಚುವರಿ ಪರಿಹಾರವನ್ನು ನೀಡುವಂತೆ ಯೂನಿಯನ್ ಕಾರ್ಬೈಡ್‌ಗೆ ನಿರ್ದೇಶಿಸಬೇಕು ಎಂದು ಕೋರಿತ್ತು. 1989ರಲ್ಲಿ ಸಂಭವಿಸಿದ ದುರಂತದಿಂದ ಉಂಟಾದ ಮಾನವ ಜೀವನ ಮತ್ತು ಪರಿಸರ ಹಾನಿಯಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗಲಿಲ್ಲ ಎಂದು ಸರ್ಕಾರ ವಾದಿಸಿತ್ತು.

    ಇದನ್ನೂ ಓದಿ: ವಿಜಯವಾಣಿ-ದಿಗ್ವಿಜಯ ಬಳಗದ 14 ಮಂದಿ ಸೇರಿ 175 ಸಾಧಕರಿಗೆ ಮಾಧ್ಯಮ ಅಕಾಡೆಮಿ ಪುರಸ್ಕಾರ

    ಆದರೆ, ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠವು ಕೇಂದ್ರದ ಅರ್ಜಿಯನ್ನು ತಿರಸ್ಕರಿಸಿತು. ವಂಚನೆಯ ಆಧಾರದ ಮೇಲೆ ಮಾತ್ರ ಪ್ರಕರಣದ ಇತ್ಯರ್ಥವನ್ನು ಬಗೆಹರಿಸಬಹುದು. ಆದರೆ, ಕೇಂದ್ರವು ಅಂತಹ ಯಾವುದೇ ತಕರಾರು ಅಥವಾ ವಾದವನ್ನು ಇಲ್ಲಿ ಮಂಡಿಸಿಲ್ಲ ಎಂದು ಹೇಳಿದೆ.

    ಎರಡು ದಶಕಗಳ ನಂತರವೂ ಈ ವಿಷಯವನ್ನು ಪ್ರಸ್ತಾಪಿಸಲು ಕೇಂದ್ರವು ಯಾವುದೇ ತರ್ಕಬದ್ಧ ನಿಲುವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇರುವ 50 ಕೋಟಿ ರೂ. ಮೊತ್ತವನ್ನು ಬಾಕಿ ಇರುವ ಪರಿಹಾರದ ಕ್ಲೈಮ್‌ಗಳನ್ನು ಕ್ಲಿಯರ್ ಮಾಡಲು ಬಳಸಿಕೊಳ್ಳುವಂತೆ ಕೋರ್ಟ್​ ನಿರ್ದೇಶನ ನೀಡಿದೆ.

    ಸದ್ಯ ಡಾ ಕೆಮಿಕಲ್ಸ್ ಒಡೆತನದಲ್ಲಿರುವ ಯೂನಿಯನ್ ಕಾರ್ಬೈಡ್ 1989ರಲ್ಲಿ ಪರಿಹಾರದಡಿ 715 ಕೋಟಿ ರೂ. ಪರಿಹಾರ ನೀಡಿತ್ತು.

    1984ರ ಡಿಸೆಂಬರ್ 2 ರಂದು, ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಯಿತು. ಈ ದುರಂತದಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆಗಿನ ಯೂನಿಯನ್ ಕಾರ್ಬೈಡ್ ಅಧ್ಯಕ್ಷ ವಾರೆನ್ ಆಂಡರ್ಸನ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಲಿಲ್ಲ. 1992ರಲ್ಲಿ ಭೋಪಾಲ್ ನ್ಯಾಯಾಲಯವು ಅವರನ್ನು ಪರಾರಿ ಎಂದು ಘೋಷಿಸಿತು. 2014ರಲ್ಲಿ ಅವರು ಸಾಯುವ ಮೊದಲು ಎರಡು ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಯಿತು. 2010ರ ಜೂನ್ 7ರಂದು ಭೋಪಾಲ್ ನ್ಯಾಯಾಲಯವು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನ ಏಳು ಕಾರ್ಯನಿರ್ವಾಹಕರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

    ಇದನ್ನೂ ಓದಿ: ಸುಮಲತಾ ಬಗ್ಗೆ ಯಾರೂ ಮಾತಾಡಬೇಡಿ: ಜೆಡಿಎಸ್​ ನಾಯಕರಿಗೆ ಮಾಜಿ ಪ್ರಧಾನಿ ಎಚ್​ಡಿಡಿ ಸಲಹೆ
    .
    ಇದರ ನಡುವೆ ಕೇಂದ್ರವು 2010ರ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿತು. ಅಂದಹಾಗೆ ನ್ಯಾಯಾಲಯವು ಪ್ರತಿಕೂಲ ತೀರ್ಪು ನೀಡಿದಾಗ ಅದರ ಮರುಪರಿಶೀಲನೆ ಕೋರಿ ಕ್ಯುರೇಟಿವ್ ಅರ್ಜಿಯನ್ನು ಕೊನೆಯ ಉಪಾಯವಾಗಿ ಸಲ್ಲಿಸಬಹುದಾಗಿದೆ. (ಏಜೆನ್ಸೀಸ್​)

    ಸುಮಲತಾ ಅಂಬರೀಷ್ ಬೆಂಬಲ ಬೂಸ್ಟರ್ ಡೋಸ್; ಮಂಡ್ಯದ BJP ಕಾರ್ಯಕರ್ತರಿಗೆ ಬಿ.ಎಲ್.ಸಂತೋಷ ಪತ್ರ!

    ಸೆಕ್ಯೂರಿಟಿ ಗಾರ್ಡ್​ಗೆ ಚಪ್ಪಲಲ್ಲಿ ಹೊಡೆದ ಮಹಿಳೆ! ಅಸಲಿಗೆ ಆದದ್ದಿಷ್ಟು…

    ರಾಜ್ಯದಲ್ಲಿ ಇಂದಿನಿಂದ ಸಾಧಾರಣ ಮಳೆ; ಹವಾಮಾನ ಇಲಾಖೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts