VIDEO| ಮದುವೆ ಶಾಸ್ತ್ರ ನಡೆಯುವಾಗಲೇ ನಿದ್ರೆಗೆ ಜಾರಿದ ವಧು; ವರ ಮಾಡಿದ್ದೇನು ನೋಡಿ..

wedding viral video
Published on

ನವದೆಹಲಿ: ಮದುವೆ ಎಂದರೆ ಸಡಗರ, ಸಂಭ್ರಮವಾಗಿದೆ. ವಧು-ವರರಿಗೆ ತುಂಬಾ ವಿಶೇಷವಾದ ದಿನವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಮದುವೆಯ ಕೆಲವು ಕ್ಷಣಗಳು ವೈರಲ್​ ಆಗುತ್ತಿರುತ್ತವೆ. ಇದೀಗ ಮದುವೆ ಮಂಟದಲ್ಲಿ ವಧು ಮಾಡಿದ ಕೆಲಸವೊಂದು ವೈರಲ್‌ ಆಗಿದೆ.

ವಿಡಿಯೋದಲ್ಲಿ ಏನಿದೆ?: ಮದುವೆ ಮಂಟಪದಲ್ಲಿ ವಧು-ವರ ಕುಳಿತಿರುತ್ತಾರೆ. ಕೆಲ ಶಾಸ್ತ್ರಗಳು ನಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಸಮಯದಲ್ಲಿ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿರುತ್ತಾರೆ ವಧು ಮದುವೆಯ ವಿಧಿವಿಧಾನಗಳ ಮಧ್ಯೆ ನಿದ್ದೆಗೆ ಜಾರಿದಳು. ಅವಳ ಸುತ್ತಲಿನ ಜನರಿಗೆ ಈ ವಿಷಯವನ್ನ ಗಮನಿಸಲು ಸಾಧ್ಯವಾಗಲಿಲ್ಲ. ಆದರೆ ವರ ಆಕೆಯನ್ನು ಎಚ್ಚರಗೊಳಿಸುತ್ತಾನೆ. ವಧುವನ್ನು ವರ ಎಬ್ಬಿಸಿದ ರೀತಿ ವೈರಲ್ ಆಗಿದೆ.

ಮದುವೆಯ ದಿನದಂದು, ಆಚರಣೆಗಳು ಮತ್ತು ಮನೆಕೆಲಸಗಳಿಂದ ಮದುಮಕ್ಕಳು ಸಂಪೂರ್ಣವಾಗಿ ಸುಸ್ತಾಗುತ್ತಾರೆ. ಕೆಲವೊಮ್ಮೆ ಇಬ್ಬರೂ ಮಂಟಪದಲ್ಲಿ ಆಕಳಿಸುವುದನ್ನು ಕಾಣಬಹುದು, ಮತ್ತು ಕೆಲವೊಮ್ಮೆ ಅವರು ನಿದ್ರೆಗೆ ಜಾರುತ್ತಾರೆಂದು ನೆಟ್ಟಿಗರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net