ನಾಯಿಯನ್ನು ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಯುವಕ ಸಾವು; Video Viral

Tragic Death
Published on

ಹೈದರಾಬಾದ್​: ಆಘಾತಕಾರಿ ಘಟನೆಯೊಂದರಲ್ಲಿ (Shocking Incident) ಯುವಕನೋರ್ವ (Youth) ನಾಯಿಯನ್ನು (Dog) ಓಡಿಸಲು ಹೋಗಿ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ (Hydrebad) ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್​ (Video Viral) ಆಗಿದೆ.

ಘಟನೆಯೂ ವಿವಿ ಪ್ರೈಡ್​ (VV Pride) ಹೋಟೆಲ್​ನಲ್ಲಿ ನಡೆದಿದ್ದು, ಮೃತನನ್ನು ಉದಯ್​ ಕುಮಾರ್​ (22) ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತನ ಬರ್ತ್​ಡೇ ಪಾರ್ಟಿಯಲ್ಲಿ (Birthday Party) ಭಾಗಿಯಾಗಲು ಬಂದಿದ್ದಾಗ ದುರ್ಘಟನೆ ಸಂಭವಿಸಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer), ಯುವಕ ಉದಯ್​ ತನ್ನ ಸ್ನೇಹಿತನ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾಗಲು ಹೋಟೆಲ್​ಗೆ ಬಂದಿದ್ದು, ಮೂರನೇ ಮಹಡಿಯಲ್ಲಿ ರೂಮ್​ ಮಾಡಿಕೊಂಡಿದ್ದನು. ತನ್ನ ರೂಮ್​ನಿಂದ ಹೊರಬಂದ ವೇಳೆ ನಾಯಿ ಕಂಡಿದ್ದು, ಮೂರನೇ ಮಹಡಿಗೆ ಬಂದಿರುವುದನ್ನು ನೋಡಿ ಆತ ಅದದರ ಜೊತೆ ಆಟವಾಡಲು ಶುರು ಮಾಡಿದ್ದಾನೆ. ಇದಾದ ಬಳಿಕ ಆತ ಅದನ್ನು ಓಡಿಸಲು ಮುಂದಾಗಿದ್ದು, ಅದರ ಹಿಂದೆ ಓಡುವಾಗ ದುರದೃಷ್ಟವಶಾತ್ ಲಾಬಿಯಲ್ಲಿದ್ದ ಕಿಟಕಿಯಿಂದ ಆಯತಪ್ಪಿ ಹೊರಗೆ ಬಿದ್ದಿದ್ದಾನೆ. 

ಕೂಡಲೇ ಇದನ್ನು ಗಮನಿಸಿದ ಆತನ ಸ್ನೇಹಿತರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಚಾರವನ್ನು ಮೃತನ ಕುಟುಂಬಸ್ಥರಿಗೆ ತಿಳಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) 194ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net