ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದೂರು! 3ನೇ ವಿಡಿಯೋದಲ್ಲಿ ಸ್ಫೋಟಕ ತಿರುವು

cd case
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಕೊಳಿ ವಿರುದ್ಧ 'ಸಂತ್ರಸ್ತ' ಯುವತಿ 3ನೇ ವಿಡಿಯೋ ರಿಲೀಸ್​ ಮಾಡಿದ್ದಾಳೆ.

ರಾಜ್ಯದ ಜನತೆ, ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷದವರು ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಇಷ್ಟು ದಿನ ಕಾಡುತ್ತಿದ್ದ‌ ಜೀವ ಭಯ ನನ್ನನ್ನು ದೂರವಾಗಿದೆ. ನನ್ನಪರ ವಕೀಲರಾದ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ ಎಂದು ಯುವತಿ ವಿವರಿಸಿದ್ದಾಳೆ. ಇದರಿಂದ ರಮೇಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ.

ವಕೀಲರ ಮೂಲಕ ಕಳುಹಿಸಿದ ದೂರನ್ನು ಅನಿವಾರ್ಯವಾಗಿ ಸ್ವೀಕರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಬೇಕಾಗಿದೆ. ಕಾರಣ ರಮೇಶ ಜಾರಕಿಹೊಳಿ ಸಹ ತನ್ನ ಆಪ್ತ ಮಾಜಿ ಶಾಸಕ ನಾಗರಾಜು ಮೂಲಕವೇ ದೂರು ಸಲ್ಲಿಸಿದ್ದರು. ಅದರ ಮೇಲೆ ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಅಲ್ಲದೆ, ರಮೇಶ್ ಜಾರಕಿಹೊಳಿ ದಾಖಲಿಸಿರುವ ಎಫ್ಐಆರ್​ನಲ್ಲಿ ಯುವತಿ ಹೆಸರು ಉಲ್ಲೇಖ ಇಲ್ಲದ ಕಾರಣ ಪ್ರತಿ ದೂರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net