ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

suicide
Published on

ಚಿಕ್ಕಬಳ್ಳಾಪುರ: ಎರಡು ಮಕ್ಕಳ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿ ನಡೆದಿದೆ.

ನಳಿನಿ (36) ಮೃತ ದುರ್ದೈವಿ. ಶಿಡ್ಲಘಟ್ಟ ಮೂಲದ ನಳಿನಿಯನ್ನು 16 ವರ್ಷದ ಹಿಂದೆ ಚಿಂತಾಮಣಿ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಶ್ರೀರಾಮ ಎಂಬುವರ ಜತೆ ಮದುವೆ ಮಾಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಖವಾಗಿ ಸಂಸಾರ ಮಾಡಬೇಕಿದ್ದ ನಳಿನಿಯನ್ನ ಗಂಡನ ಹಣದಾಹವೇ ಬಲಿ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿರಿ ನೂರಾರು ಕನಸಿನೊಂದಿಗೆ ದಾಪಂತ್ಯಕ್ಕೆ ಕಾಲಿಟ್ಟವಳ ಬದುಕಲ್ಲಿ ದುರಂತ, ತವರು ಮನೆಯಲ್ಲೇ ಯುವತಿ ಆತ್ಮಹತ್ಯೆ

ಮದುವೆ ಆದ ಕೆಲ ವರ್ಷಗಳ ಬಳಿಕ ವರದಕ್ಷಿಣೆ ತರುವಂತೆ ನಳಿನಿಯನ್ನು ಗಂಡ ಹೊಡೆದು ತವರು ಮನೆಗೆ ಕಳುಹಿಸುತ್ತಿದ್ದನಂತೆ. ಹಣಕ್ಕಾಗಿ ಮಾನಸಿಕ-ದೈಹಿಕ ಹಿಂಸೆ ನೀಡುತ್ತಿದ್ದ. ನನ್ನ ಮಗಳು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರದಕ್ಷಿಣೆ ಕಿರುಕುಳ ಕೊಟ್ಟು ಮಗಳ ಸಾವಿಗೆ ಆಕೆಯ ಗಂಡನೇ ಕಾರಣ ಆಗಿದ್ದಾನೆ. ನಮಗೆ ನ್ಯಾಯ ಕೊಡಿಸಿ ಮೃತಳ ತಾಯಿ ಒತ್ತಾಯಿಸಿದ್ದಾರೆ. ಅಮ್ಮನನ್ನು ಕಳೆದುಕೊಂಡ ಹೆಣ್ಣುಮಕ್ಕಳಿಬ್ಬರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net