More

    ನಕಲಿ ಪಾಸ್‌ಪೋರ್ಟ್‌,ವೀಸಾ: ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಓರ್ವ ಬಂಧನ

    ನವದೆಹಲಿ: ನಕಲಿ ಪಾಸ್‌ಪೋರ್ಟ್‌ ಹಾಗೂ ವೀಸಾ ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಪನ್ನು ಹತ್ಯೆಗೆ ಸಂಚು ಪ್ರಕರಣ.. ನಿಖಿಲ್ ಗುಪ್ತಾ ಹಸ್ತಾಂತರಕ್ಕೆ ಜೆಕ್ ರಿಪಬ್ಲಿಕ್ ಕೋರ್ಟ್ ಅನುಮತಿ

    ಗುರುವಾರ ದುಬೈನಿಂದ ಆಗಮಿಸಿದ ಆರೋಪಿ ಸಾದಿಕುಲ್ಲಾ ಬೇಗ್‌ನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ನಕಲಿ ವೀಸಾ ಪ್ರಕರಣ ಸಂಬಂಧ ಬೇಗ್‌ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

    ಬೇಗ್‌ ಲ್ಯಾಂಡ್‌ ಆದ ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಬೇಗ್‌ನನ್ನು ವಶಕ್ಕೆ ಪಡೆದು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸ್‌ ಉಪ ಆಯುಕ್ತೆ ಉಶಾ ರಂಗನಾಣಿಯವರು ತಿಳಿಸಿದ್ದಾರೆ.

    ನಕಲಿ ವೀಸಾ ಪ್ರಕರಣದ ಕುರಿತು ಮಾಹಿತಿ ನೀಡಿದ ಉಷಾ ರಂಗನಾಣಿ, ಪಂಜಾಬ್​ ಲೂಧಿಯಾನಾದ ಹರ್ವಿಂದರ್ ಸಿಂಗ್ ಧನೋವಾ ಎಂಬಾತ ಕೆಲವು ತಿಂಗಳ ಹಿಂದೆ, ಏಜೆಂಟ್ ಮುಸ್ಕಾನ್ ಉರ್ಫ್‌ ಮನ್‌ಪ್ರೀತ್ ಕೌರ್ ಒದಗಿಸಿದ ಕೆನಡಾದ ನಕಲಿ ವೀಸಾದಲ್ಲಿ ಪ್ರಯಾಣಿಸುತ್ತಿದ್ದ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಮತ್ತೊಬ್ಬ ಏಜೆಂಟ್ ಸಾದಿಕುಲ್ಲಾ ಬೇಗ್‌ಗೆ 5 ಲಕ್ಷ ರೂಪಾಯಿ ನೀಡಿದ್ದಾಗಿ ಹೇಳಿದ್ದ ಎಂದು ತಿಳಿಸಿದ್ದಾರೆ.

    ನಕಲಿ ವೀಸಾ ಸ್ಟಿಕ್ಕರ್ ನನ್ನು ದುಬೈ ಮೂಲದ ಏಜೆಂಟ್​ ಓರ್ವ ನೀಡಿದ್ದಾಗಿ ಬೇಗ್​ ವಿಚಾರಣೆ ವೇಳೆ ಹೇಳಿದ್ದಾನೆ. ಹಾಗೂ ಆರೋಪಿ ಸೇರಿ ತನ್ನ ಸಹಚರರು ಹಣದ ಆಸೆಗೆ ಹಲವರನ್ನು ವಂಚಿಸಿರುವುದಾಗಿ ತಪ್ಪುಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಮಕ್ಕಳು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts