ಪಾಕಿಸ್ತಾನ, ಚೀನಾ, ಭಾರತ ಆಯ್ತು.. ಈಗ ಶ್ರೀಲಂಕಾದಿಂದ ಬಂದು ಯುವಕನನ್ನು ವರಿಸಿದ ಯುವತಿ

shrilanka love
Published on

ಚಿತ್ತೂರು: ಇತ್ತೀಚಿಗೆ ದೇಶ ವಿದೇಶಗಳ ನಡುವಿನ ಲವ್​​ ಸ್ಟೋರಿಗಳು ಬೆಳಕಿಗೆ ಬರುತ್ತಿದ್ದು, ಈಗಾಗಲೇ ಪಾಕಿಸ್ತಾನ ಸೀಮಾ ಹೈದರ್, ರಾಜಸ್ಥಾನ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ತೆರಳಿದ್ದು ಸುದ್ದಿ ಇನ್ನೂ ಹಸಿರಾಗಿರುವಂತೆಯೇ, ಸದ್ಯ ಶ್ರೀಲಂಕಾದ ಹುಡುಗಿಯೊಬ್ಬಳು ಆಂಧ್ರ ಪ್ರದೇಶದ ಯುವಕನನ್ನು ವರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಹಿಳೆಯರ ಗ್ಯಾಂಗ್​ ಕಟ್ಟಿಕೊಂಡು ಎರಡನೇ ಪತ್ನಿಗೆ ಮನಬಂದಂತೆ ಥಳಿಸಿದ ಪತಿಯ ಮೊದಲ ಹೆಂಡತಿ..!

ಚಿತ್ತೂರು ಜಿಲ್ಲೆಯ ವಿ.ಕೋಟ ಮಂಡಲದ ಅರಿಮಾಕುಲಪಲ್ಲೆ ಗ್ರಾಮದ ನಿವಾಸಿಯಾಗಿರುವ ಲಕ್ಷ್ಮಣ್ ಎಂಬ ಯುವಕ, ಶ್ರೀಲಂಕಾದ ಬೆಳಂಗುಡು ಪ್ರದೇಶದ ವಿಘ್ನೇಶ್ವರಿಕಿ ಎಂಬ ಯುವತಿಯೊಂದಿಗೆ ಫೇಸ್ ಬುಕ್​​ನಲ್ಲಿ ಸ್ನೇಹ ಬೆಳೆಸಿದ್ದು, ಈ ಸ್ನೇಹವು ದಿನಗಳೆದಂತೆ ಪ್ರೀತಿಗೆ ತಿರುಗಿತ್ತು. ಈ ಜೋಡಿಯು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೇ ತಿಂಗಳ 8ರಂದು ವಿಘ್ನೇಶ್ವರಿಯು ಪ್ರವಾಸಿ ವೀಸಾ ಪಡೆದುಕೊಂಡು ಚೆನ್ನೈಗೆ ಆಗಮಿಸಿದ್ದಾಳೆ. ಮೇಸ್ತ್ರಿಯಾಗಿ ಜೀವನ ಸಾಗಿಸುತ್ತಿರುವ ಲಕ್ಷ್ಮಣ್, ಅವಳನ್ನು ಆತ್ಮೀಯವಾಗಿ ಸ್ವಾಗತಿಸಿ ತನ್ನ ಮನೆಗೆ ಕರೆತಂದರು.

ಕೊನೆಗೆ ಈ ಜೋಡಿಯು ಜುಲೈ 20ರಂದು ವೆಂಕಟಗಿರಿಕೋಟಾದ ಸಾಯಿಬಾಬಾ ದೇವಸ್ಥಾನದಲ್ಲಿ ವಿವಾಹವಾಗಿದ್ದು, ವಿಶ್ಲೇಶ್ವರಿ ಇಲ್ಲಿ ವಾಸ್ತವ್ಯ ಹೂಡಿರುವ ವಿಷಯ ತಿಳಿದ ಜಿಲ್ಲಾಧಿಕಾರಿಗಳು ಮೂರು ದಿನಗಳ ಹಿಂದೆ ದಂಪತಿಯನ್ನು ಸಂಪರ್ಕಿಸಿದ್ದರು. ಅಲ್ಲದೇ, ಪೊಲೀಸ್ ವರಿಷ್ಠಾಧಿಕಾರಿ ವೈ.ರಿಶಾಂತ್ ರೆಡ್ಡಿ, ಈ ದಂಪತಿಯನ್ನು ಭೇಟಿಯಾಗಿ ಆಕೆಗೆ ಪ್ರವಾಸಿ ವೀಸಾ ಅವಧಿ ಮುಗಿಯುವ ಆಗಸ್ಟ್ 6ರೊಳಗೆ ಶ್ರೀಲಂಕಾಕ್ಕೆ ಮರಳಬೇಕು ಎಂದು ನೋಟಿಸ್ ನೀಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಸೀಮಾ ಹೈದರ್​ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಅದರಂತೆ ಭಾರತ ಮೂಲದ ಅಂಜು ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ನಸ್ರುಲ್ಲಾ ಎಂಬ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತೆರಳಿ ಮತಾಂತರಗೊಂಡು ಮದುವೆಯಾಗಿದ್ದರು. ಜತೆಗೆ ಚೀನಾದ ಗಾವೊ ಪೆಂಗ್(21)​ ತನ್ನ ಪ್ರಿಯಕರ ಜಾವೇದ್​(18)ನನ್ನು ಭೇಟಿಯಾಗಲು ಪಾಕಿಸ್ತಾದ ಇಸ್ಲಾಮಾಬಾದ್​ಗೆ ತೆರಳಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net