ಟಾಕ್ಸಿಕ್​ ಶೂಟಿಂಗ್​ ವೇಳೆ ಯಶ್​ ಸಿಗರೇಟ್​ ಸೇದುತ್ತಿರುವ ದೃಶ್ಯ ವೈರಲ್​: ಶರ್ಟ್​ಲೆಸ್​ ಲುಕ್​ಗೆ ಫ್ಯಾನ್ಸ್​ ಫಿದಾ! Toxic

untitled-design-2025-10-14t135220879-68ee086469847 (1)
Published on

ಬೆಂಗಳೂರು: ಕನ್ನಡದ ಸ್ಟಾರ್​ ನಟ ಯಶ್​ ಪ್ರಸ್ತುತ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರ ಟಾಕ್ಸಿಕ್​ ಚಿತ್ರೀಕರಣದಲ್ಲಿ ಸಧ್ಯ ಬ್ಯುಸಿಯಾಗಿದ್ದಾರೆ. ನಟ ಶರ್ಟ್​ ಧರಿಸದೆ ಬಾಲ್ಕನಿಯಲ್ಲಿ ಸಿಗರೇಟ್​ ಸೇದುತ್ತಾ ನಿಂತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಇದೀಗ ಭಾರೀ ಸದ್ದು ಮಾಡುತ್ತಿದೆ.

ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಯಶ್​ ಬಾಲ್ಕನಿಯಲ್ಲಿ ನಿಂತಿರುವುದನ್ನು ಈ ದೃಶ್ಯ ತೋರಿಸುತ್ತದೆ. ಯಶ್​ ಜೀನ್ಸ್​ ಧರಿಸಿ ಶರ್ಟ್​ ಇಲ್ಲದೇ ಸಿಗರೇಟ್​ ಸೇದುತ್ತಿರುವುದನ್ನು ತೋರಿಸಲಾಗಿದೆ. ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಯೊಬ್ಬರು ದೂರದಿಂದ ನಿಂತು ವಿಡಿಯೋ ಮಾಡಿದ್ದಾರೆ. ಈ ದೃಶ್ಯ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಇನ್ನು ಈ ದೃಶ್ಯಕ್ಕೆ ಸಾವಿರಾರು ಕಮೆಂಟ್​ಗಳು ಹರಿದುಬಂದಿದ್ದು, ಒಬ್ಬ ಅಭಿಮಾನಿ ಸ್ವ್ಯಾಗ್ ಅನ್ನು ನೋಡಿ ಎಂದು ಕಮೆಂಟ್​ ಮಾಡಿದ್ದಾನೆ. ಇನ್ನೋರ್ವ ಬಳಕೆದಾರ ಓ ದೇವರೆ ಈ ವಿಡಿಯೋದಲ್ಲಿ ಯಶ್​ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಈ ಚಿತ್ರ ಬಹು ನಿರೀಕ್ಷೆಯೊಂದಿಗೆ ಬಿಡುಗಡೆಯಾಗಲಿದೆ ಎಂದು ಬರೆದಿದ್ದಾರೆ. ಇನ್ನು ಕೆಲವರು ಚಿತ್ರದ ಟೀಸರ್​ ಬಡುಗಡೆಗಾಗಿ ಕಾಯುತ್ತಿದ್ದೇವೆ ಎಂದು ಬರೆದಿದ್ದಾರೆ.

ಈ ಹಿಂದೆ ಟಾಕ್ಸಿಕ್​ ಸಿನಿಮಾ ತಂಡವು ತನ್ನ ಅಧೀಕೃತ ಎಕ್ಸ್​ ಖಾತೆಯಲ್ಲಿ ಮುಂಬೈ ನಂತರ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಿದ್ದೇವೆ ಎಂದು ಬರೆದುಕೊಂಡಿತ್ತು. ಹಾಲಿವುಡ್​ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ನೇತೃತ್ವದಲ್ಲಿ ಮುಂಬೈನಲ್ಲಿ 45 ದಿನಗಳ ಶೂಟಿಂಗ್​ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದು, ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿ, ಮಾರ್ಚ್​ 19, 2026 ರಲ್ಲಿ ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಟಾಕ್ಸಿಕ್ ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಒಂದು ಪೀರಿಯಡ್ ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು, ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ನಯನತಾರಾ , ಕಿಯಾರಾ ಅಡ್ವಾಣಿ, ತಾರಾ ಸ್ಟುಟಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್ ಮತ್ತು ವಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net