

Chanakya Niti: ಆಚಾರ್ಯ ಚಾಣಕ್ಯರನ್ನು ಇತಿಹಾಸದಲ್ಲಿ ಅತ್ಯಂತ ಬುದ್ಧಿವಂತ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಮಕ್ಕಳನ್ನು ಬೆಳೆಸುವ ಬಗ್ಗೆ ಹಲವಾರು ರೀತಿಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಇವರ ಪ್ರಕಾರ, ತಂದೆ ಮಗನ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸುವುದನ್ನು ತಪ್ಪಿಸಬೇಕು. ಇದು ಮಗನ ಹಠಮಾರಿತನಕ್ಕೆ ಕಾರಣವಾಗಬಹುದು. ಇಂತಹ ಮಕ್ಕಳು ಪಾಲಕರ ಸಲಹೆಗಳನ್ನು ಕೇಳಲು ನಿರಾಕರಿಸುತ್ತಾರೆ. ಜೀವನದಲ್ಲಿ ಸವಾಲುಗಳನ್ನು ಎದುರಿಸಲು ದುರ್ಬಲವಾಗುತ್ತಾರೆ ಎಂದು ಹೇಳಿದ್ದಾರೆ.
ನಿಮ್ಮ ಮಗ ದೊಡ್ಡವನಾದ ಮೇಲೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಿ. . ನಿರ್ಧಾರಗಳು ಚಿಕ್ಕದಾಗಿರಲಿ ಇಲ್ಲ ದೊಡ್ಡದಾಗಿರಲಿ ಅವುಗಳನ್ನು ಆತನೇ ತೆಗದುಕೊಳ್ಳುವಂತೆ ಪ್ರೇರೇಪಿಸಿ, ಬದಲಿಗೆ ಅದರ ಬದಲು ನೀವು ಮಧ್ಯಪ್ರವೇಶಿಸಬೇಡಿ. ಈ ರೀತಿ ಮಾಡುವುದರಿಂದ ಅವನ ಪ್ರಯತ್ನ ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. ತಂದೆ ಮಗನ ನಿರ್ಧಾರಗಳಲ್ಲಿ ನಿರಂತರ ಹಸ್ತಕ್ಷೇಪ ಮಾಡಿದ್ದಲ್ಲಿ ಮಗನಾದವನು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಹೀಗಾಗಿ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಾನೆ.
ಅನೇಕ ಪಾಲಕರು ಮಕ್ಕಳಿಗೆ ಹಣದ ಮಹತ್ವವನ್ನು ವಿವರಿಸುತ್ತಾರೆ. ಆದರೆ ನೈತಿಕ ಮೌಲ್ಯಗಳು, ಸಂಸ್ಕಾರ, ಒಳ್ಳೆಯ ನಡೆತಗಳನ್ನು ತಿಳಿಸುವಲ್ಲಿ ಎಡವುತ್ತಾರೆ. ನಿಮ್ಮ ಮಕ್ಕಳಿಗೆ ನೀವು ಕಲಿಸುವ ಉತ್ತಮ ಮೌಲ್ಯಗಳು ಸಮಾಜದಲ್ಲಿ ಅವರ ವ್ಯಕ್ತಿತ್ವ ಗುರಿತಿಸುವಂತೆ ಮಾಡುತ್ತದೆ. ಆಗ ಜವಬ್ದಾರಿ ನಾಗರಿಕರಾಗಿ ಹೊರಹೊಮ್ಮುತ್ತಾರೆ. ಉತ್ತಮ ಮೌಲ್ಯಗಳು ಹಣಕ್ಕಿಂತ ಹೆಚ್ಚು ಬೆಲೆ ಬಾಳುತ್ತವೆ.
ಇಂದಿನ ದಿನಗಳಲ್ಲಿ ತಂದೆ ತಾಯಿಗಳಿಗೆ ಮಕ್ಕಲು ಎಷ್ಟೇ ಬೆಳೆದಿದ್ದರೂ ಅವರಿನ್ನು ಚಿಕ್ಕ ಮಕ್ಕಳೆಂದು ಗುರುತಿಸುತ್ತಾರೆ. ಹಾಗಾಗಿ ಅವರಿಗೆ ಅನುಭವದ ಕೊರತೆ ಇದೆ ಎಂದು ತಿಳಿದು ಅವರು ಹೇಳಿದ ನಿರ್ಧಾರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಚಾಣಿಕ್ಯನ ಪ್ರಕಾರ, ಪ್ರತಿಯೊಂದು ಮಗುವಿಗೂ ಬೆಳೆದಂತೆ ತನ್ನದೇ ಆದ ಅನುಭವ, ತಿಳುವಳಿಕೆಯನ್ನು ಪಡೆಯಲು ಆರಂಭಿಸುತ್ತಾನೆ. ಇದರಿಂದ ಅವರು ಸ್ವಂತ ಅನುಭವಗಳನ್ನು ಪಡೆಯುತ್ತಾರೆ. ಹಾಗಾಗಿ ತಪ್ಪು ಮಾಡಿದರೆ ತಿದ್ದಿ, ಅವರನ್ನು ಮುನ್ನಣೆಯಲು ಬಿಡಿ.
ನಿಮ್ಮ ಮಕ್ಕಳ ಒಳ್ಳೆಯ ಗುಣಗಳನ್ನು ಗುರುತಿಸಿ ಮೆಚ್ಚಬೇಕು. ಆದರೆ ತುಂಬಾ ಹೊಗಳಬೇಡಿ. ಇದು ನಿಮ್ಮ ಮಗನನ್ನು ಆಲಸ್ಯತನಕ್ಕೆ ಕರೆದೊಯ್ಯುತ್ತದೆ. ಹಾಗೆಯೇ ಆತನ ಸ್ನೇಹಿತರ ಮುಂದೆ ನಿಮ್ಮ ಮಗನ ಗುಣಗಳನ್ನು ಸಾರಬೇಡಿ ಇದು ಅವರಲ್ಲಿ ಅಸೂಯೆ ಹುಟ್ಟಿಸುತ್ತದೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.