

ಬೆಂಗಳೂರು: ಸೋಷಿಯಲ್ ಮೀಡಿಯಾ ದಿಗ್ಗಜ ಆ್ಯಪ್ಗಳಲ್ಲಿ ಒಂದಾಗಿರುವ ಎಕ್ಸ್ನಲ್ಲಿ ಬಹಳಷ್ಟು ಪರೋಡಿ ಅಕೌಂಟ್ಗಳಿವೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಹೆಸರಿನಲ್ಲಿ ಕೂಡ ಪರೋಡಿ ಅಕೌಂಟ್ಗಳಿವೆ.
ಇಂಥ ಪರೋಡಿ ಅಕೌಂಟ್ಗಳಿಂದ ತಮಾಷೆ ಅನಿಸುವಂಥ ಪೋಸ್ಟ್ಗಳು ಆಗುತ್ತಿರುತ್ತವೆ. ಅಂಥದ್ದೇ ಒಂದು ಪೋಸ್ಟ್ಗೆ ಬಂದ ಪ್ರತಿಕ್ರಿಯೆ ಮತ್ತಷ್ಟು ತಮಾಷೆಯನ್ನು ಉಂಟುಮಾಡಿದೆ. ಅಷ್ಟಕ್ಕೂ ಎಲಾನ್ ಮಸ್ಕ್ನ ಪರೋಡಿ ಅಕೌಂಟ್ನಿಂದ ನೀಡಲಾದ ಮಾಹಿತಿಯೊಂದು ತಪ್ಪಾಗಿದ್ದು, ಅದು ಮಸ್ಕ್ ಅಮ್ಮನ ಗಮನಕ್ಕೂ ಬಂದಿತ್ತು.
'ನಾನು 1969ರಲ್ಲೇ ಟೆಸ್ಲಾ ಬಗ್ಗೆ ಯೋಚಿಸುತ್ತಿದ್ದೆ' ಎಂದು ಮಸ್ಕ್ನ ಹಳೆಯ ಫೋಟೋ ಜತೆಗೆ ಪರೋಡಿ ಅಕೌಂಟ್ನಿಂದ ಪೋಸ್ಟ್ ಮಾಡಲಾಗಿತ್ತು. ಇದನ್ನು ಕಂಡ ಮಸ್ಕ್ ಅಮ್ಮ ಮಯೆ ಮಸ್ಕ್, ಮಸ್ಕ್ ಹುಟ್ಟಿದ್ದು 1971ರಲ್ಲಿ ಎಂದು ಕೋಟ್ ಮಾಡಿ ರಿಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ಎಲಾನ್ ಮಸ್ಕ್ ಕುರಿತಂತೆ ಸುಳ್ಳು ಹೇಳಿದ ಪರೋಡಿ, ಮಸ್ಕ್ ಅಮ್ಮನ ಕೈಯಲ್ಲೇ ಸಿಕ್ಕಿಬಿದ್ದಂತಾಗಿದೆ.