More

    ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!

    ಕೊಡಗು/ಶಿವಮೊಗ್ಗ: ಎಂಥವರೇ ಆದರೂ ಒಮ್ಮೆ ಬೆಚ್ಚಿಬೀಳುವಂಥ ಎರಡು ಪ್ರಕರಣಗಳು ಇಂದು ರಾಜ್ಯದಲ್ಲಿ ನಡೆದಿವೆ. ಈ ಎರಡೂ ಪ್ರಕರಣಗಳಿಗೆ ಸರ್ಪವೇ ಕಾರಣವೆಂಬುದು ಕಾಕತಾಳೀಯ ಹಾಗೂ ‘ಸರ್ಪ’ರೈಸ್!

    ಹೌದು.. ಮನೆಯೊಂದರ ದೇವರಕೋಣೆಯಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾದರೆ, ವಿದ್ಯಾರ್ಥಿಯೊಬ್ಬನ ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು ಕಂಡುಬಂದಿದೆ. ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೊಡಗು ಹಾಗೂ ಇನ್ನೊಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಮಡಿಕೇರಿಯ ಇಂದಿರಾನಗರದ ಶಿವಪ್ಪ ಅವರ ಮನೆಯ ದೇವರಕೋಣೆಯಲ್ಲಿ ಇಂದು ಮಧ್ಯಾಹ್ನ ದೊಡ್ಡ ಕಾಳಿಂಗ ಸರ್ಪ ಕಂಡುಬಂದಿದೆ. ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಮನೆಯವರು ಒಮ್ಮೆ ಬೆಚ್ಚಿಬಿದ್ದಿದ್ದರು. ಬಳಿಕ ಉರಗ ತಜ್ಞ ಯದುಕುಮಾರ್ ಅವರಿಗೆ ವಿಷಯ ತಿಳಿಸಲಾಗಿದ್ದು, ಅವರು ತಕ್ಷಣ ಧಾವಿಸಿ ಹಾವನ್ನು ಹಿಡಿದು ಮದೆನಾಡಿನ ದೇವರ ಕಾಡಿಗೆ ಬಿಟ್ಟಿದ್ದಾರೆ.

    ಇದನ್ನೂ ಓದಿ: ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!

    ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಎಂಬಾತನ ಶಾಲಾ ಚೀಲದಲ್ಲಿ ನಾಗರಹಾವು ಕಂಡುಬಂದಿದೆ.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಪುಸ್ತಕ ಹೊರ ತೆಗೆಯುವಾಗ ಚೀಲದೊಳಗಿದ್ದ ನಾಗರಹಾವು ಕಾಣಿಸಿದ್ದು, ಆತ ತಕ್ಷಣ ತನ್ನ ಸಹಪಾಠಿ ಮಣಿಕಂಠನಿಗೆ ವಿಷಯ ತಿಳಿಸಿದ್ದ. ಮಣಿಕಂಠ ಕೂಡಲೇ ಬ್ಯಾಗ್​ನ ಜಿಪ್ ಹಾಕಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾನೆ. ಬ್ಯಾಗ್ ಹೊರತಂದ ಶಿಕ್ಷಕರು, ಪಾಲಕರಿಗೆ ಮಾಹಿತಿ ನೀಡಿದ್ದು, ನಂತರ ಅವರ ಸಹಾಯದಿಂದ ನಾಗರಹಾವನ್ನು ಕಾಡಿಗೆ ಬಿಡಲಾಯಿತು. ವಿದ್ಯಾರ್ಥಿ ಮಣಿಕಂಠನ ಸಮಯಪ್ರಜ್ಞೆಗೆ ಶಿಕ್ಷಕರು, ಪೋಷಕರು ಹಾಗೂ ಇತರ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಂದ್ರಯಾನ-3ರ ಯಶಸ್ಸಿನ ಹಿಂದಿತ್ತು ಮಸಾಲೆ ದೋಸೆ ಮತ್ತು ಕಾಫಿಯ ಮಹತ್ವದ ಪಾತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts