ಯೂಟ್ಯೂಬರ್ ವಾಸನ್​ ಬೈಕ್​ ಅಪಘಾತ; ಈ ರೀತಿಯ ಸ್ಟಂಟ್​ಗಳನ್ನು ಬೆಂಬಲಿಸಬೇಡಿ: ರೈಟರ್ ರತ್ನ ಕುಮಾರ್

Untitled design - 2023-09-18T152441.227
Published on

ತಮಿಳುನಾಡು: ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್, ಹೈ-ಸ್ಪೀಡ್ ಮೋಟಾರ್‌ಸೈಕಲ್ ಸವಾರಿ ಮತ್ತು ಸಾಹಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ಟಿಟಿಎಫ್ ವಾಸನ್, ಭಾನುವಾರ (ಸೆ.17) ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ವೀಲಿ ಮಾಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಮನವಿ ಮಾಡಿದ 'ಲಿಯೋ' ಸಿನಿಮಾದ ಬರಹಗಾರ, ಈ ರೀತಿಯ ಸ್ಟಂಟ್​ಗಳನ್ನು ಬೆಂಬಲಿಸಬೇಡಿ ಎಂದು ಹೇಳಿದ್ದಾರೆ.

ಬೈಕ್ ಅಪಘಾತದ ಕುರಿತು ಮಾತನಾಡಿದ ದಳಪತಿ ವಿಜಯ್​ ನಟನೆಯ 'ಲಿಯೋ' ಸಿನಿಮಾದ ಬರಹಗಾರ ರತ್ನ ಕುಮಾರ್, "ಜನಪ್ರಿಯ ಯೂಟ್ಯೂಬರ್, ದಯವಿಟ್ಟು ಈ ರೀತಿಯ ಡೇರ್‌ಡೆವಿಲ್ ಬೈಕ್ ಸ್ಟಂಟ್​ಗಳನ್ನು ಪ್ರೋತ್ಸಾಹಿಸಬೇಡಿ. ನೀವು ಅಷ್ಟೂ ಆಸಕ್ತರಾಗಿದ್ದರೆ, ಇಂಥ ಸ್ಟಂಟ್​ಗಳನ್ನು ರೇಸ್ ಟ್ರ್ಯಾಕ್‌ನಲ್ಲಿ ಮಾಡಿ. ನಿಮ್ಮ ಥ್ರಿಲ್‌ಗೋಸ್ಕರ ಸಾಮಾನ್ಯ ಜನರು ಯಾಕೆ ಬಲಿಯಾಗಬೇಕು. ಶೀಘ್ರವೇ ಗುಣಮುಖರಾಗಿ" ಎಂದು ಹೇಳಿದ್ದಾರೆ.

ಟಿಟಿಎಫ್ ವಾಸನ್ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಜಾಗದಲ್ಲಿ ಅತಿವೇಗದ ಚಾಲನೆಗಾಗಿ ವಾಸನ್​ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net