

ನವದೆಹಲಿ: ನಾವು ಪ್ರಪಂಚದಲ್ಲಿ ಕೆಲವು ಅದ್ಭುತಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾವು ಇಂದು ಹೇಳಲು ಹೊರಟಿರುವ ಸುದ್ದಿ ನಿಮಗೆ ಖಂಡಿತವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತದೆ.
ಹೌದು ನಾವು ಇಂದು ವಿಶ್ವದ ಅತ್ಯಂತ ಚಿಕ್ಕ ಎಸ್ಕಲೇಟರ್ ಎಂದು ಗಿನ್ನೆಸ್ ದಾಖಲೆ ಮಾಡಿರುವ ಎಸ್ಕಲೇಟರ್ ಕುರಿತಾಗಿ ಹೇಳುತ್ತಿದ್ದೇವೆ. ಈ ಚಿಕ್ಕ ಎಸ್ಕಲೇಟರ್ ಎಷ್ಟು ಹಂತಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದರೆ ಖಂಡಿತಾ ಹೀಗೂ ಇರುತ್ತಾ? ಎನ್ನುವ ಪ್ರಶ್ನೆ ಬರುತ್ತದೆ. ಇದು ವಿಶ್ವದ ಅತ್ಯಂತ ಚಿಕ್ಕ ಎಸ್ಕಲೇಟರ್ ಎಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪಟ್ಟಿಮಾಡಲಾಗಿದೆ.
ಎಸ್ಕಲೇಟರ್ ಎಂದರೆ ಮೇಲಕ್ಕೆ ಹೋಗುವುದು ಎಂದರ್ಥ. ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಮಾಲ್‌ಗಳಂತಹ ಸ್ಥಳಗಳಲ್ಲಿ ಮೆಟ್ಟಿಲುಗಳನ್ನು ಹತ್ತಲು ಅಗತ್ಯವಿಲ್ಲದೇ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಅವುಗಳನ್ನು ಬಳಸುತ್ತಾರೆ ಎಂದು ತಿಳಿದಿದೆ. ಆದರೆ ಇಷ್ಟು ಚಿಕ್ಕ ಎಸ್ಕಲೇಟರ್ ಅನ್ನು ಏಕೆ ಸ್ಥಾಪಿಸಲಾಯಿತು..? ಕೇವಲ ಐದು ಮೆಟ್ಟಿಲಿಗೆ ಎಸ್ಕಲೇಟರ್ ಯಾಕೆ..? ಎಂಬ ಅನುಮಾನ ಬರುತ್ತದೆ. ಈ ಬುಲ್ಲಿ ಎಸ್ಕಲೇಟರ್ ಎಲ್ಲಿದೆ? ಅದರ ವೈಶಿಷ್ಟ್ಯಗಳನ್ನು ನೋಡೋಣ.
ಇದನ್ನೂ ಓದಿ: ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ
ಈ ಎಸ್ಕಲೇಟರ್ ಜಪಾನ್‌ನ ಕವಾಸಾಕಿಯಲ್ಲಿದೆ. ಕವಾಸಕಿ ರೈಲ್ವೇ ನಿಲ್ದಾಣದ ದಕ್ಷಿಣ ಗೇಟ್‌ನಿಂದ ಹೊರ ಬಂದರೆ. ಎದುರುಗಡೆ ಇರುವ ಮೋರ್ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಈ ಬುಲ್ಲಿ ಎಸ್ಕಲೇಟರ್ ಇದೆ. ಇದು ಕೇವಲ ಐದು ಮೆಟ್ಟಿಲುಗಳನ್ನು ಹೊಂದಿದೆ. ಈ ಸ್ಥಳದಲ್ಲಿ ಎಸ್ಕಲೇಟರ್ ಅಗತ್ಯವಿದೆಯೇ? ಎಂದು ನೋಡಿದವರೆಲ್ಲ ಹೇಳುತ್ತಾರೆ. ಆದರೆ ಇಂತಹ ಚಿಕ್ಕ ಎಸ್ಕಲೇಟರ್ ನೋಡಲು ಜನ, ಆ ಸೂಪರ್ ಮಾರ್ಕೆರ್ಟ್ಗೆ ಬರುತ್ತಾರೆ ಎನ್ನುವುದು ಮತ್ತೊಂದು ಆಶ್ಚರ್ಯಕರವಾದ ವಿಷಯವಾಗಿದೆ.
ಈ ಎಸ್ಕಲೇಟರ್ ಹಿಂದಿನ ಉದ್ದೇಶ: ಮಾರುಕಟ್ಟೆಯ ಬೇಡಿಕೆಯನ್ನು ಹೆಚ್ಚಿಸಲು ಈ ರೀತಿ ಇಂತಹ ಬುಲ್ಲಿ ಎಸ್ಕಲೇಟರ್ ಅನ್ನು ಸ್ಥಾಪಿಸಲಾಗುತ್ತದೆ. ಅದನ್ನು ಅವರ ಅಗತ್ಯಗಳಿಗಾಗಿ ಸ್ಥಾಪಿಸಲಾಗಿದೆ ಎಂದು ಕೂಡಾ ಹೇಳುತ್ತಾರೆ. ಜನರು ಈ ಬುಲ್ಲಿ ಎಸ್ಕಲೇಟರ್ ನೋಡಲು ಬರುತ್ತಾರೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಇದರಿಂದ ಈ ವಿಚಿತ್ರ ಎಸ್ಕಲೇಟರ್ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ.