

ಬೆಂಗಳೂರು: ಹೊಸೂರು ಸಮೀಪದ ಬಾಗಲೂರಿನಲ್ಲಿನ ಖಾಸಗಿ ಲೇಔಟ್ನಲ್ಲಿ ಕೈಯ್ಯಲ್ಲಿ ಆಯುಧಗಳನ್ನ ಹಿಡಿದು ಗ್ಯಾಂಗ್ವೊಂದು ಕಳ್ಳತನಕ್ಕಿಳಿದಿದ್ದು, ನಾಲ್ವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅಪಾರ್ಟ್‌ಮೆಂಟ್, ವಿಲ್ಲಾಗಳಲ್ಲಿ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿದ್ದು, ವಿಲ್ಲಾ ಸಿಸಿಟಿವಿಗಳಲ್ಲಿ ಕಳ್ಳರ ಚಲನವಲನದ ದೃಶ್ಯ ಸೆರೆಯಾಗಿದೆ. ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಅಸಾಮಿಗಳು ಕಳ್ಳತನಕ್ಕಿಳಿದಿದ್ದು, ಕೈಯ್ಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಓಡಾಡುತ್ತಿರುವುದು ಕಂಡುಬರುತ್ತದೆ.
ಕೆಲವೆಡೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದು, ಸಿಸಿಟಿವಿಯಲ್ಲಿನ ಕಳ್ಳರ ಚಲನವಲನ ದೃಶ್ಯ ಕಂಡು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಾಗಲೂರು ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.