More

    ನಾಪತ್ತೆಯಾಗಿರುವ ಜುನೈದ್ ಮಾಹಿತಿ ಕಲೆ ಹಾಕಿದ ಸಿಸಿಬಿ ಟೀಂ, ಈಗ ಎಲ್ಲಿದ್ದಾನೆ?

    ಬೆಂಗಳೂರು: ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಸದ್ಯ ನಾಪತ್ತೆಯಾಗಿರುವ ಜುನೈದ್ ಮಾಹಿತಿಯನ್ನು ಸಿಸಿಬಿ ಟೀಂ ಕಲೆ ಹಾಕುತ್ತಿದೆ.

    2021 ರಲ್ಲಿ ಜುನೈದ್ ಬೆಂಗಳೂರು ಬಿಟ್ಟಿದ್ದು, ಕೊಲೆ ಕೇಸ್​​​​​ಗೂ ಮುಂಚೆಯೇ ಜುನೈದ್ ಬಳಿ ಪಾಸ್ ಪೋರ್ಟ್ ಇತ್ತು. ಅದೇ ಪಾಸ್ ಪೋರ್ಟ್ ಬಳಸಿ ಜುನೈದ್ ವಿದೇಶಕ್ಕೆ ಹಾರಿದ್ದು, ಒರಿಜಿನಲ್ ಪಾಸ್ ಪೋರ್ಟ್ ಮೂಲಕ ಪ್ರಯಾಣ ಮಾಡಿರುವುದು ಪತ್ತೆಯಾಗಿದೆ.

    2017ರಲ್ಲಿ ಕೊಲೆ ಕೇಸ್​​​ನಲ್ಲಿ ಜುನೈದ್ ಭಾಗಿಯಾಗಿದ್ದು, ಕೊಲೆ ಕೇಸ್​​​​ನಲ್ಲಿ ಯಾವ ಇಂಟರ್ನ್ಯಾಷನಲ್ ಲಿಂಕ್ ಇರಲಿಲ್ಲ. ಹೀಗಾಗಿ ಪೊಲೀಸರು ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. 2021ರಲ್ಲಿ ಜುನೈದ್ ದುಬೈ ವೀಸಾ ಪಡೆದು ಹೋಗಿದ್ದು, ನಂತರ ದುಬೈನಿಂದ ಮಿಡಲ್ ಈಸ್ಟ್​​​​ನಲ್ಲಿರುವ ದೇಶದ ನಗರವೊಂದಕ್ಕೆ ಜಂಪ್ ಮಾಡಿದ್ದಾನೆ.

    ಅಜೆರ್ಬೈಜಾನ್ ದೇಶದ ಬಾಕು ಎಂಬ ನಗರದಲ್ಲಿ ಜುನೈದ್ ಇರೋ ಮಾಹಿತಿ ಸಿಕ್ಕಿದ್ದು, ಸದ್ಯ ಇಂಟರ್ ಪೋಲ್ ಮೂಲಕ ಜುನೈದ್ ಪತ್ತೆಮಾಡಲು ಸಿಸಿಬಿ ಮುಂದಾಗಿದೆ.

    ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವೋ ಜನ; ಸರ್ವರ್ ಡೌನ್ ಹಿನ್ನೆಲೆ ಮೊಬೈಲ್​​​​ನಲ್ಲಿಯೇ ನೋಂದಣಿ ಮಾಡುತ್ತಿರುವ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts