More

    VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ

    ನವದೆಹಲಿ: ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನೇ ಬಿಟ್ಟು ಹೋರಟಿರುವ ಮಹಿಳಾ ಯೋಧೆಯ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಭಾವನಾತ್ಮಕ ವಿಡಿಯೋ ಎಂಥವರನ್ನೂ ಭಾವುಕರಾಗಿಸುತ್ತದೆ.

    ಬಿಎಸ್‌ಎಫ್ ಮಹಿಳಾ ಯೋಧೆ ತನ್ನ 9 ತಿಂಗಳ ಮಗುವನ್ನು ದೇಶ ಸೇವೆಗಾಗಿ ಬಿಟ್ಟು ಹೋಗುತ್ತಿರುವ ವಿಡಿಯೋ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿದೆ. ಮನೆಗೆ ಬಂದಿದ್ದ ಬಿಎಸ್‌ಎಫ್ ಮಹಿಳಾ ಯೋಧರೊಬ್ಬರು ಕರ್ತವ್ಯಕ್ಕೆ ಹಿಂತಿರುಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮಹಿಳೆ ರೈಲು ಹತ್ತುವಾಗ ತನ್ನ ಮಗು ತನ್ನ ತೋಳುಗಳಲ್ಲಿ ಅಳುತ್ತಿರುವುದನ್ನು ನೋಡಿ ಭಾವುಕಳಾಗುತ್ತಾಳೆ.

    ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಡುತ್ತಿದ್ದಂತೆ ಆಕೆಯ ಪತಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಭಾವುಕರಾಗಿ ಕಣ್ಣೀರು ಸುರಿಸುತ್ತಾ ಆಕೆ ಎಲ್ಲರಿಗೂ ವಿದಾಯ ಹೇಳುತ್ತಾಳೆ.

    ಮಹಿಳಾ ಸೈನಿಕ ಮತ್ತು ಆಕೆಯ ಮಗುವಿನ ಭಾವನಾತ್ಮಕ ವಿದಾಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಮಹಿಳಾ ಯೋಧೆಯ ದೇಶ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts