ನಾಯಕಿಯರ ಸೀರೆ ಎಳೆಯುವುದು ನನಗೆ ಬೇಸರತರಿಸುತ್ತದೆ ಎಂದ ಖ್ಯಾತ ನಟ

I got fed up of pulling heroines sarees in films Actor Ranjeet
Published on

ಮುಂಬೈ: ಸಿನಿಮಾಗಳಲ್ಲಿ ವಿಲನ್​ಗಳು ನಟಿಯರ ಸೀರೆ ಎಳೆದು ಕಿರುಕುಳ ನೀಡುವ ದೃಶ್ಯಗಳು ನನಗೆ ಬೇಸರ ತರಿಸುತ್ತದೆ ಎಂದು ಬಾಲಿವುಡ್​​ ನಟ ರಂಜೀತ್ ಹೇಳಿದ್ದಾರೆ.

1970ರಲ್ಲಿ ಸಾವನ್ ಭಾಡೋನ್ ಚಿತ್ರದ ಮೂಲಕ ರಂಜೀತ್ ಎಂದು ಪ್ರಸಿದ್ಧರಾದ ಇವರು ಬಾಲಿವುಡ್‌ಗೆ ಕಾಲಿಟ್ಟರು. ಫರೇಬಿ, ನಾಗಿನ್, ಅಮರ್ ಅಕ್ಬರ್ ಆಂಥೋನಿ, ಸುಹಾಗ್, ರಾಕಿ, ಸರ್ಫರೋಶ್ ಹೀಗೆ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಪ್ರಸಿದ್ಧಿ ಪಡೆದಿದ್ದಾರೆ.

ಕಿರುಕುಳದ ದೃಶ್ಯ ಒಳಗೊಂಡಿರುವ ಪಾತ್ರಗಳನ್ನು ನಿರ್ವಹಿಸಿದರು ಸಾಕಷ್ಟು ಅಭಿಮಾನಿಗಳು ಹಾಗೂ ಖ್ಯಾತಿಯನ್ನು ಸಂಪಾದಿಸಿದರು. ಆದರೆ ಅವರ ಯಶಸ್ಸಿನ ಹೊರತಾಗಿಯೂ, ರಂಜೀತ್ ವೈಯಕ್ತಿಕವಾಗಿ ಕೆಲವು ವಿಚಾರಗಳ ಕುರಿತಾಗಿ ಹತಾಶೆಗೊಂಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

"ನಾನು ಯಾರಿಗಾಗಿ ತುಂಬಾ ಕೆಲಸ ಮಾಡುತ್ತಿದ್ದೇನೆಂದು ನನಗೆ ನಾನೇ ತುಂಬಾ ಬಾರಿ ಪ್ರಶ್ನೆ ಮಾಡಿಕೊಂಡಿದ್ದೇನೆ. ಒಂದು ಬಾರಿ ನನ್ನ ತಾಯಿ ನನ್ನನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದರು, ಅವರು ಹಿಂತಿರುಗಬೇಕಾದಾಗ, ಅವರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ನಾನು ನನ್ನ ಡ್ರೈವರ್‌ಗೆ ಕೇಳಿದೆ. ಆಗ ನನ್ನ ತಂದೆ ನನ್ನನ್ನು ರೇಗಿಸಿದ್ದರು" ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ನಾನು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನು. ಎಲ್ಲಾ ನಟರೊಂದಿಗೆ ನನ್ನ ದಿನಾಂಕಗಳನ್ನು ಹೊಂದಿಸಬೇಕಾಗಿತ್ತು. ಬೆಳಿಗ್ಗೆ 9, ಮಧ್ಯಾಹ್ನ 1 ಗಂಟೆಗೆ ಹೀಗೆ ಎಲ್ಲಾ ಸಮಯವನ್ನೂ ಶೂಟಿಂಗ್​​ನಲ್ಲಿಯೇ ಕಳೆಯುತ್ತಿದ್ದೇನು. ಸಿನಿಮಾ ಕೆಲಸಗಳಲ್ಲಿಯೇ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net