More

    ಬೆಂಗಳೂರಿನಲ್ಲಿ ಆಟೋ ಪ್ರಯಾಣ ಸಖತ್​​ ದುಬಾರಿ; 500 ಮೀಟರ್ ಆಟೋ ಸವಾರಿಗೆ 100 ರೂ. ವಸೂಲಿ

    ಬೆಂಗಳೂರು: ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವುದು ದುಬಾರಿಯಾಗಿದೆ ಎಂದು ನಾವು ಹೊಸದಾಗಿ ಹೇಳಬೇಕಾಗಿಲ್ಲ. ಅನೇಕ ಬಾರಿ, ಬೆಂಗಳೂರಿನ ಆಟೋ ಚಾಲಕರು ಸಣ್ಣ ಪ್ರಯಾಣಗಳಿಗೆ ಹೆಚ್ಚು ಅಥವಾ ಎಕ್ಸಟ್ರಾ ಹಣವನ್ನು ಕೊಡುವಂತೆ ಕೇಳುತ್ತಾರೆ. ಹೀಗೆ ಇಲ್ಲೊಬ್ಬ ಮುಂಬೈ ಮೂಲದ ಕಂಪನಿಯ ಸಿಇಒ ಬೆಂಗಳೂರಿನ ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ

    ”ಈ ಫೋಟೋದಲ್ಲಿ ನೀವು ಬೆಂಗಳೂರಿನಲ್ಲಿರುವ ಅಲಂಕಾರಿಕ ವಸ್ತುವನ್ನು ನೋಡುತ್ತೀರಿ. ಅದುವೇ ಇಲ್ಲಿ ಕಾಣಿಸುತ್ತೀರುವ ದೊಡ್ಡ ಆಟೋ ಮೀಟರ್. ಇದು ಎಷ್ಟು ದುಬಾರಿ ಎಂದರೆ ಅದು ಎಂದಿಗೂ ಬಳಕೆಯಾಗುವುದಿಲ್ಲ. ಇಂದು ನಾನು ಕೇವಲ 500 ಮೀಟರ್ ಆಟೋದಲ್ಲಿ ಪ್ರಯಾಣಿಸಲು 100ರೂ ನೀಡಿದ್ದೇನೆ. ಇದೇ ಮುಂಬೈನಲ್ಲಿ ಆಗಿದ್ದರೆ 100 ರೂಪಾಯಿಗೆ ಸುಮಾರು 9 ಕಿಮೀ ಪ್ರಯಾಣಿಸ ಬಹುದಾಗಿತ್ತು” ಎಂದು ಟ್ವೀಟ್​​​ ಮಾಡಿದ್ದಾರೆ.

      ಇದನ್ನೂ ಓದಿ: VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ

    ಈ ಟ್ವೀಟ್​​​ ವೈರಲ್​ ಆಗುತ್ತಿದ್ದಂತೆ ಕೆಲವು ತಮಗೆ ಆಗಿರುವ ಕಹಿ ಅನುಭವಗಳ ಕುರಿತಾಗಿ ಕಾಮೆಂಟ್​​​ ಮಾಡಿದ್ದಾರೆ. ಟಿವಿಎಫ್‌ನ ಅಧ್ಯಕ್ಷ ವಿಜಯ್ ಕೋಶಿ, ”ಇದು ಮುಂಬೈನ ಹೊರತಾಗಿ, ಪ್ರತಿಯೊಂದು ನಗರಕ್ಕೂ ಪ್ರಾಯೋಗಿಕವಾಗಿ ಒಂದೇ ಆಗಿರುತ್ತದೆ. ಚೆನ್ನೈ ಆಟೋ ಸವಾರಿಗೆ ಕುಖ್ಯಾತಿ ಪಡೆದಿದೆ.’’ ಎಂದಿದ್ದಾರೆ. ಇದು ಹೆದ್ದಾರಿ ದರೋಡೆ. ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಕೆಲವೇ ನಗರಗಳಲ್ಲಿ ಮೀಟರ್ ಹಾಕಿ ದರ ನಿಗಧಿ ಪಡಿಸುತ್ತಾರೆ ಎಂದೆಲ್ಲ ಕಾಮೆಂಟ್​​ ಮಾಡಿ ಆಟೋ ದರದ ಕುರಿತಾಗಿರುವ ಅಸಮಧಾನ ಹೊರ ಹಾಕಿದ್ದಾರೆ.

    ಇದನ್ನೂ ಓದಿ: ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದ ಅಸಾಮಿಗಳು; ಪ್ರತಿಷ್ಠಿತ ಬಡಾವಣೆಗಳೇ ಇವರ ಟಾರ್ಗೆಟ್ 

    ಕಳೆದ ವರ್ಷ, ಕರ್ನಾಟಕ ಸರ್ಕಾರವು ಮೊದಲ ಎರಡು ಕಿಲೋಮೀಟರ್‌ಗಳಿಗೆ ಮೀಟರ್ ದರವನ್ನು 25 ರೂ. ನಿಂದ 30ಕ್ಕೆ ಮತ್ತು ಕಿಲೋಮೀಟರ್‌ಗೆ ಮೂಲ ಬೆಲೆಯನ್ನು 13 ರಿಂದ 15 ಕ್ಕೆ ಏರಿಸಿತ್ತು. ಆದರೆ ಈಗ ಎಷ್ಟರ ಮಟ್ಟಿಗೆ ಇದು ಬಳಕೆಯಾಗುತ್ತಿದೆ ಎನ್ನುವುದು ಹಲವರ ಪ್ರಶ್ನೆಯಾಗಿದೆ.

    ಬರೋಬ್ಬರಿ 87 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts