

ನವದೆಹಲಿ: ಬಾಳೆಹಣ್ಣು ಅತ್ಯಂತ ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಬಾಳೆಹಣ್ಣನ್ನು ಸವಿಯಲು ಹಲವಾರು ವಿಧಾನಗಳಿವೆ. ಅದು ಕೇಕ್, ಮಫಿನ್, ಐಸ್ ಕ್ರೀಮ್ ಅಥವಾ ಪ್ಯಾನ್‌ಕೇಕ್ ಯಾವುದೇ ರೂಪವಿರಲಿ ನಾವೆಲ್ಲರೂ ಬಾಳೆಹಣ್ಣನ್ನು ಸವಿಯಲು ಇಷ್ಟಪಡುತ್ತೇವೆ.
ಈ ಹಣ್ಣಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ ಮತ್ತು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಅದಕ್ಕಾಗಿಯೇ ಎಲ್ಲರು ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದೀಗ ಒಂದು ಜಾತಿಯ ಬಾಳೆಹಣ್ಣಿನ ಬಗ್ಗೆ ಆಸಕ್ತಿದಾಯಕ ಸಂಗತಿಯನ್ನು ನಾವು ನಿಮಗೆ ಪರಿಚಯಿಸಲಿದ್ದೇವೆ. ಇತ್ತೀಚೆಗೆ ಟ್ವಿಟರ್ನಲ್ಲಿ ವಿಶಿಷ್ಟವಾದ ದೈತ್ಯಾಕಾರದ ಬಾಳೆಹಣ್ಣಿನ ವಿಡಿಯೋ ವೈರಲ್ ಆಗಿದೆ.
ಇಂಡೋನೇಷ್ಯಾದ ಹತ್ತಿರವಿರುವ ಪಪುವಾ ನ್ಯೂಗಿನಿಯಾ ದ್ವೀಪಗಳಲ್ಲಿ ದೊಡ್ಡ ಗಾತ್ರದ ಬಾಳೆಹಣ್ಣನ್ನು ಬೆಳೆಯಲಾಗುತ್ತದೆ. ಇಲ್ಲಿ ಬಾಳೆ ಮರವು ತೆಂಗಿನ ಮರದ ಎತ್ತರದಲ್ಲಿದೆ ಮತ್ತು ಹಣ್ಣುಗಳು ದೊಡ್ಡದಾಗಿ ಬೆಳೆಯುತ್ತವೆ. ಪ್ರತಿ ಬಾಳೆಹಣ್ಣು ಸುಮಾರು 3 ಕೆಜಿ ತೂಗುತ್ತದೆ. ಇದು ಹಣ್ಣು ಹಣ್ಣಾಗಲು ಸುಮಾರು ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಈ ಹಣ್ಣನ್ನು ವ್ಯಾಪಕವಾಗಿ ಬೆಳೆಯುವುದಿಲ್ಲ.
ಟ್ವಿಟರ್ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಈವರೆಗೆ 41 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದವರೆಲ್ಲ ಹುಬ್ಬೇರಿಸುವ ಮೂಲಕ ಬಗೆ ಬಗೆಯ ಕಾಮೆಂಟ್ಗಳನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)