More

    ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್

    ವಿಜಯನಗರ: ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಎಂದರೆ ಪುಣ್ಯ ಮಾಡಿರಬೇಕು. ಇದೊಂದು ಗಾದೆ, ಇದನ್ನು ಹಿರಿಯರು ಹೇಳಿರುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

    ಪಾಪಿನಾಯನಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಇದು ಸಾಮಾನ್ಯವಾದ ಸ್ಥಳವಲ್ಲ, ಇಲ್ಲಿ ಕೆಲವು ನನ್ನವೂ ಕೂಡ ಜಮೀನುಗಳಿವೆ. ಪಾಪಿನಾಯಕನ ಹಳ್ಳಿಗೆ ನೀರು ಒಯ್ಯಬೇಕು ಅಂದಾಗ, ಕಮಲಾಪುರದ ರೈತರು ಬಹಳ ಸಹಾಯ ಮಾಡಿದ್ದಾರೆ. ಒಂದೇ ಒಂದು ರೂಪಾಯಿ ತಗೊಂಡಿಲ್ಲಾ. ಈ ಯೋಜನೆಗೆ ಯಡಿಯೂರಪ್ಪನವರು ವಿಡಿಯೋ ಕಾನ್ಫರೇನ್ಸ್ ಮೂಲಕ ಅಡಿಗಲ್ಲು ಹಾಕಿದ್ದರು.18 ಕೆರೆಗಳಲ್ಲಿ ಇದ್ದವು, ಇನ್ನೂ ಉಳಿದದ್ದು 4 ಹೊಸ ಕೆರೆಗಳು ಮಾಡಿ ಒಟ್ಟು 22 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇವೆ. ನಾನು ಮಾತು ಕೊಟ್ಟರೆ ಉಳಿಸಿಕೊಳ್ಳುತ್ತೇನೆ. ಹಾಗಾದ್ರೆ ಮಾತ್ರ ನಾನು ಹೇಳುತ್ತೆನೆ ಎಂದಿದ್ದಾರೆ.

    ಇದನ್ನೂ ಓದಿ: ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು..!

    ಇಟ್ಟ ಹೆಜ್ಜೆ ಹಿಂದೆ ಇಡೋಲ್ಲಾ, ನಾನು ಬಿಡಲಿಲ್ಲಾ. ನಾನು ಪ್ರಚಾರಪ್ರಿಯ ವ್ಯಕ್ತಿ ಅಲ್ಲಾ, ನನಗೆ ಪ್ರಚಾರದ ಹುಚ್ಚಿಲ್ಲಾ. ನಾನು ಜನರ ಮನಸ್ಸಲ್ಲಿದ್ದೇನೆ. ಈ ಯೋಜನೆಗೆ ಬಹಳ ರೈತರು ಹೋರಾಟ ಮಾಡಿದ್ದಾರೆ. ಒಂದು ಜಿ.ಪಂ ಇಂದ ಕೊಳಾಯಿ ಹಾಕಬೇಕು ಎಂದರೆ ಸುಲಭದ ಮಾತಲ್ಲ. 22 ಕೆರೆಗಳಿವೆ ನೀರು ತುಂಬಿಸೋದು ಅಂದ್ರೆ ಸುಲಭವಲ್ಲ, ನನ್ನಿಂದ ಆಗೋಲ್ಲಾ ಅಂತ ನಾನು ಸುಮ್ಮನಾಗಿದ್ದೆ. ಯಡಿಯೂರಪ್ಪ ಅವರು ಸಿಎಂ ಇದ್ದಾಗ, ನನ್ನ ಮಾತು ಈಡೇರೆಸುತ್ತೇನೆಂದು ಹೇಳಿದ್ದರು. ನಾನು ವಿಜಯನಗರ ಜಿಲ್ಲೆ ಮತ್ತು ಏತನೀರಾವರಿ ಯೋಜನೆಯ ಬೇಡಿಕೆ ಇಟ್ಟಿದ್ದೇನೆ.

    ಇದನ್ನೂ ಓದಿ:  ಬೆಡ್‌ರೂಂನಲ್ಲಿ ಮಲಗಿ ಬುಸುಗುಟ್ಟಿದ 6 ಅಡಿ ಉದ್ದ ವಿಷಕಾರಿ ಹಾವು!
    ಬಳ್ಳಾರಿ ಜಿಲ್ಲೆಯ ಯಾವುದೋ ಮೂಲೆಯಲ್ಲಿ ವಿಜಯನಗರ ಇತ್ತು. ಜಿಲ್ಲೆಗಾಗಿ ಉಳ್ಳೇಶ್ವರ ಹೋರಾಟ ಮಾಡಿದ್ದೇವೆ. ಹೇಗಾದ್ರೂ ಮಾಡಿ, ಆನಂದ್ ಸಿಂಗ್ ನ ಕಟ್ಟಿ ಹಾಕಬೇಕು ಅಂತ ಪಣ ತೊಟ್ಟಿದ್ದಾರೆ. ಯಾರಿಂದ ಯಾರನ್ನೂ ಕಟ್ಟಿಹಾಕೋಕೆ ಆಗೋಲ್ಲ, ಆ ಪರಮಾತ್ಮ ಕಟ್ಟಿ ಹಾಕಬೇಕು ಹೊರತು ಬೇರೆಯಾರಿಂದಲೂ ಸಾಧ್ಯವಿಲ್ಲ. ನನ್ನ ಅಭಿವೃದ್ಧಿ ಕೆಲಸಗಳು ನನ್ನ ಆಯುಧವಾಗಿದೆ ಎಂದು ಹೇಳಿದ್ದಾರೆ.

    ಡಿಕೆಶಿ ಸಹಾಯವನ್ನು ಏಳೇಳು ಜನ್ಮಕ್ಕೂ ಮರೆಯುವುದಿಲ್ಲ: ಬಾಬುರಾವ್ ಚಿಂಚನಸೂರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts