ಬೆಂಗಳೂರಿಗೆ ಬಂದ ವಿಶ್ವ ಬ್ಯಾಂಕ್ ಪ್ರತಿನಿಧಿಗಳು; ವಿಪತ್ತು ನಿರ್ವಹಣೆ ಸಭೆಯಲ್ಲಿ ಭಾಗಿ

5156
Published on

ಬೆಂಗಳೂರು: ಮಳೆಯಿಂದ ಹಾನಿಯಾದ ಪ್ರದೇಶವನ್ನು ವಿಶ್ವ ಬ್ಯಾಂಕ್ ಪ್ರತಿನಿಧಿಗಳು ಬಂದು ವೀಕ್ಷಿಸಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಅವರೊಂದಿಗೆ ಚರ್ಚಿಸಿದ್ದಾರೆ.

ಅಧಿಕಾರಿಗಳು ವಾತಾವರಣದ ಸ್ಥಿತಿಸ್ಥಾಪಕತ್ವ (Climate Resilience) ಸಭೆಯಲ್ಲಿ ಭಾಗವಹಿಸಿ ವಿಪತ್ತು ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಡೆಮಾಲಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ.

ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವ್ಯಾಲಿಗಳು ಹಾಗೂ ಬೃಹತ್ ನೀರುಗಾಲುವೆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಹು ನಿರೀಕ್ಷಿತ ಕೆ-100 ಜಲಮಾರ್ಗ ವೀಕ್ಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net