ಮಾಲ್ಡೀವ್ಸ್​ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ ವಾಟರ್ ಬೇಬಿ ರಶ್ಮಿಕಾ ಮಂದಣ್ಣ

Rashmika Mandana
Published on

ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್​ ಪ್ರವಾಸದಲ್ಲಿದ್ದಾರೆ. ಅ.7 ರಂದು ಬಿಡುಗಡೆಯಾದ ರಶ್ಮಿಕಾ ನಟನೆಯ ಗುಡ್ ಬೈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡುವಲ್ಲಿ ಸೋತಿತ್ತು. ಸಿನಿಮಾ ಸೋಲಿನ ಬೆನ್ನಲ್ಲೇ ರಶ್ಮಿಕಾ ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು.

ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ರಶ್ಮಿಕಾ ಮಂದಣ್ಣ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ನಿನ್ನೆ (ಅ.9) ಬಿಳಿ ಉಡುಗೆ ತೊಟ್ಟು ಸ್ವಿಮ್ಮಿಂಗ್ ಫೂಲ್ ಪಕ್ಕ ಕುಳಿತುಕೊಂಡಿರುವ ಫೋಟೊ ಹಂಚಿಕೊಂಡಿದ್ದರು. ಇದನ್ನ ನೋಡಿದ ರಶ್ಮಿಕಾ ಅಭಿಮಾನಿಗಳು ಖುಷಿಯಾಗಿದ್ದರು.

ಇದೀಗ ರಶ್ಮಿಕಾ ಸಮುದ್ರದಾಳಕ್ಕೆ ತೆರಳಿದ್ದಾರೆ. ಸ್ಕೂಬಾ ಡೈವಿಂಗ್ ಮಾಡುವ ಮೂಲಕ ರಶ್ಮಿಕಾ ಮಾಲ್ಡೀವ್ಸ್​ನ ಸಮುದ್ರ ಜಲಚರಗಳನ್ನು ನೋಡಿದ್ದಾರೆ. ಅಷ್ಟೇ ಅಲ್ಲಾ, ಸ್ವಿಮ್ಮಂಗ್ ಫೂಲ್​ನಲ್ಲಿ ಮಿಂದೆದ್ದಿರುವ ರಶ್ಮಿಕಾ ಇನ್ಸ್​ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಅಪ್ಲೋಡ್ ಮಾಡಿದ್ದಾರೆ. ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡಿಕೊಂಡಿರುವ ರಶ್ಮಿಕಾ ತಮ್ಮನ್ನ ವಾಟರ್ ಬೇಬಿ ಎಂದು ಕರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಫೋಟೋಗೆ 20 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ನೀಲಿ ಸಮುದ್ರದ ಫೋಟೋವನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್​ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ. ಜತೆಗೆ ನೀವು ಎಲ್ಲಿ, ಹೇಗೇ ಇರಿ. ವ್ಯಾಯಾಮ ಮತ್ರ ಮರೆಯಬೇಡಿ ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್ ಪ್ರವಾಸ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ರಶ್ಮಿಕಾ ಹಾಗೂ ವಿಜಯ್ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net