VIDEO | ಬಲವಂತವಾಗಿ ಯುವಕನ ತೊಡೆಯ ಮೇಲೆ ಕುಳಿತ ಮಹಿಳೆ! ವೀಡಿಯೋಗೆ ಕಿಡಿಕಾರಿದ ನೆಟ್ಟಿಗರು

WhatsApp-Image-2024-04-22-at-11.01.14-AM
Published on

ನವದೆಹಲಿ: ಸದಾ ಲಕ್ಷಾಂತರ ಪ್ರಯಾಣಿಕರಿಂದ ಕಂಗೊಳಿಸುವ ದೆಹಲಿ ಮೆಟ್ರೋ ರೈಲಿನಲ್ಲಿ ಒಂದಲ್ಲ ಒಂದು ರೀತಿಯ ವಿಚಿತ್ರ ಘಟನೆಗಳು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ರೀಲ್ಸ್​ ಮಾಡುವವರಿಂದಲೇ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುವ ದೆಹಲಿ ಮೆಟ್ರೋ ಈ ಬಾರಿ ಬೇರೆ ಕಾರಣಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಲವಂತವಾಗಿ ಯುವಕನ ತೊಡೆಯ ಮೇಲೆ ಕುಳಿತಿರುವ ಆಘಾತಕಾರಿ ಘಟನೆಯ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಪ್ರಯಾಣಿಕರಿಂದ ತುಂಬಿಹೋಗಿದ್ದ ರೈಲಿನಲ್ಲಿ ಮಹಿಳೆಗೆ ಸೀಟು ಸಿಕ್ಕಿಲ್ಲ ಇದಕ್ಕೆ ಸಿಟ್ಟಾದ ಮಹಿಳೆ ಏಕಾಏಕಿ ಯುವಕನ ಮೇಲೆ ಕುಳಿತು ಅಸಭ್ಯ ವರ್ತನ ತೋರಿದ್ದಾರೆ. ಈ ಅನುಚಿತ ವರ್ತನೆ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಮಹಿಳೆಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಹಿಂದೆ ಪರಸ್ಪರ ಚುಂಬಿಸುವುದು, ಜನರ ಮಧ್ಯೆ ರೀಲ್ಸ್​ ಮಾಡುವುದು, ಕುಣಿಯುವುದು ಹೀಗೆ ನಾನಾ ರೀತಿಯ ಕಾರಣಗಳಿಗೆ ದೆಹಲಿ ಮೆಟ್ರೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೆ, ಈ ಘಟನೆ ಅನೇಕರಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಮಹಿಳೆಯ ಅನುಚಿತ ವರ್ತನೆಗೆ ಹಲವರು ಕಿಡಿಕಾರಿದ್ದಾರೆ. ಈ ಬಗ್ಗೆ ದೆಹಲಿ ಮೆಟ್ರೋ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ? ಇಂತಹ ಘಟನೆಗಳಿಗೆ ಬ್ರೇಕ್ ಹಾಕಲಿದ್ಯಾ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net