More

    ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

    ಪಂಜಾಬ್: ತಮ್ಮ ಪ್ರೀತಿಯ ಮಗನನ್ನು ಜೊರಾವರ್ ಅವರನ್ನು ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶಿಖರ್ ಧವನ್​ ಮಿಸ್ ಮಾಡಿಕೊಳ್ಳುತ್ತಿದ್ದು, ಈ ಕುರಿತು ಮಗನ ಹೆಸರಿನಲ್ಲಿರುವ ಪಂಜಾಬ್ ಕಿಂಗ್ಸ್​​ ಟೀಮ್​ನ ಜರ್ಸಿಯನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ 29 ನಕ್ಸಲೀಯರ ಎನ್‌ಕೌಂಟರ್​: ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ!

    ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ತಮ್ಮ ಫ್ರಾಂಚೈಸಿಯ ಜರ್ಸಿಯನ್ನು ಬಹಿರಂಗಪಡಿಸಿದ್ದು, ಅದನ್ನು ಧರಿಸಿ ಪ್ರದರ್ಶಿಸಿದ್ದಾರೆ. ಪುತ್ರ ಜೋರಾವರ್ ಅವರ ಹೆಸರಿನಲ್ಲಿ ಜೆರ್ಸಿ ತಯಾರಾಗಿದ್ದು, ಇದೇ ಟಿ-ಶರ್ಟ್​ನ ಧರಿಸಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಧವನ್ ಅವರ ಮಾಜಿ ಪತ್ನಿ ಏಶಾ ಮುಖರ್ಜಿ, ಪುತ್ರನನ್ನು ಧವನ್​ರಿಂದ ದೂರವಿಟ್ಟಿದ್ದರು. ಈ ಬಗ್ಗೆ ಶಿಖರ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು.

    ದೆಹಲಿ ಮೂಲದ ಕ್ರಿಕೆಟಿಗರಾದ ಶಿಖರ್​ ತಮ್ಮ ಮಗನನ್ನು ಶೀಘ್ರದಲ್ಲೇ ಭೇಟಿಯಾಗುವ ಬಯಕೆಯನ್ನು ಸಹ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಧವನ್ ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ 5 ತಿಂಗಳಿಂದ ನಾನು ನನ್ನ ಮಗನನ್ನು ಭೇಟಿಯೇ ಆಗಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿದರು. ನನಗೆ ನೋವಾಗಲಿಲ್ಲ. ನಾನು ನನ್ನ ಆಲೋಚನೆಗಳನ್ನು ವ್ಯಕ್ತಪಡಿಸುತ್ತಿದ್ದೆ. ನಾನು ಅವನೊಂದಿಗೆ ಮಾತನಾಡಿ ಐದು ತಿಂಗಳೇ ಕಳೆದಿದೆ ಎಂದರು.

    ಇದನ್ನೂ ಓದಿ: ನಂಚಾರು ಸೇತುವೆಯಲ್ಲಿ ಹೊಂಡಗಳೇ ಅಧಿಕ : ಶಿಥಿಲವಾದ ಕಬ್ಬಿಣದ ಸರಳುಗಳು : ಹೊಂಡಗಳಿಂದ ಅಪಘಾತ ಭೀತಿ

    “ನಾನೊಬ್ಬ ಭಾವನಾತ್ಮಕ ವ್ಯಕ್ತಿ ಆದ ಕಾರಣ, ಆಗಾಗ್ಗೆ ಅವನಿಗೆ ಪ್ರೀತಿಯನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೆ. ಏಕೆಂದರೆ, ಅವನ ಬಗ್ಗೆ ಯೋಚನೆ ಬಂದಾಗಲೆಲ್ಲಾ ನಾನು ಭಾವುಕನಾಗ್ತಿದ್ದೆ. ಈ ಡಿಜಿಟಲ್ ಯುಗದಲ್ಲಿ ನನ್ನ ಮಗ ನಾನು ಹಾಕುವ ಪೋಸ್ಟ್ ಅನ್ನು ಓದಬಹುದು ಎಂಬ ಭರವಸೆಯೊಂದಿಗೆ ಇದನ್ನೆಲ್ಲಾ ಬರೆಯುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts