More

    ಛತ್ತೀಸ್‌ಗಢದಲ್ಲಿ 29 ನಕ್ಸಲೀಯರ ಎನ್‌ಕೌಂಟರ್​: ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ!

    ರಾಯ್‌ಪುರ: 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮೊದಲು ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಎನ್​ಕೌಂಟರ್​ನಲ್ಲಿ 29 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಇದೀಗ ಒಂದು ದಿನದ ಬಳಿಕ ಎನ್​ಕೌಂಟರ್ ಕುರಿತು ಕಾಂಗ್ರೆಸ್​ ಕಿಡಿಕಾರಿದೆ. ಈ ಬಗ್ಗೆ ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಅವರು ನಕ್ಸಲರ ವಿರುದ್ಧ ನಡೆದ ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಎಕ್ಸ್​​​ನಿಂದ ರಾಷ್ಟ್ರೀಯ ಭದ್ರತೆಗೆ ತೊಂದರೆ!: ಪಾಕಿಸ್ತಾನದಲ್ಲಿ ಟ್ಟಿಟರ್ ಖಾತೆಗೆ ನಿರ್ಬಂಧ​!

    ಬಿಜೆಪಿ ಅಧಿಕಾರಾವಧಿಯಲ್ಲಿ ಹಲವಾರು ಮುಗ್ಧ ಗ್ರಾಮಸ್ಥರಿಗೆ ನಕ್ಸಲರ ಹಣೆಪಟ್ಟಿ ನೀಡಲಾಗಿದೆ. ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಎಲ್ಲಾ 29 ಮಂದಿಯೂ ನಕ್ಸಲರೇ ಅಥವಾ ಅದರಲ್ಲಿ ಕೆಲ ಗ್ರಾಮಸ್ಥರೂ ಸಾವನ್ನಪ್ಪಿದ್ದಾರೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಆದಿವಾಸಿಗಳು ಆತಂಕದಲ್ಲಿದ್ದಾರೆ: ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೀಪಕ್ ಬೈಜ್, ಎನ್​ಕೌಂಟರ್​ನಲ್ಲಿ ಅಮಾಯಕ ಬುಡಕಟ್ಟು ಜನಾಂಗದವರು ಸಾವನ್ನಪ್ಪಿದ್ದರೆ, ಸರ್ಕಾರ ಆದಿವಾಸಿಗಳಿಂದ ತೀವ್ರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. 29 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಈ 29 ಜನರು ನಕ್ಸಲರಾಗಿದ್ದರೆ, ಇದು ಭದ್ರತಾ ಪಡೆಗಳ ದೊಡ್ಡ ಸಾಧನೆ ಎಂದು ನಾವೇ ಹೇಳುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಸ್ತಾರ್‌ನ ಆದಿವಾಸಿಗಳು ಆತಂಕದಲ್ಲಿದ್ದಾರೆ ಮತ್ತು ಭಯಭೀತರಾಗಿದ್ದಾರೆ ಎಂದರು.

    ಗ್ರಾಮಸ್ಥರನ್ನು ಕೊಂದ ಹಲವಾರು ಘಟನೆಗಳು?: ಮುಂದುವರೆದು ಮಾತನಾಡಿದ ಕಾಂಗ್ರೆಸ್ ನಾಯಕ ಬೈಜ್​, ಭೂಪೇಶ್ ಬಘೇಲ್ ರಾಜ್ಯದ ಮಾಜಿ ಮುಖ್ಯಮಂತ್ರಿ. ಅವರು ಏನೇ ಹೇಳಿದರೂ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಕ್ಸಲ್ ವಿರೋಧಿ ಕಾರ್ಯಾಚರಣೆಯ ಹೆಸರಿನಲ್ಲಿ ಗ್ರಾಮಸ್ಥರನ್ನು ಕೊಂದ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ. ಭೂಪೇಶ್ ಬಘೇಲ್ ಅವರ ಆರೋಪಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಮತ್ತು ಈ ಕಾರ್ಯಾಚರಣೆಯ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.

    ಎಲ್ಲಾ 29 ಮಂದಿ ನಕ್ಸಲರು ಮಾತ್ರ ಅಥವಾ ಕೆಲವು ಗ್ರಾಮಸ್ಥರು ಸಹ ಮಾರಣಾಂತಿಕವಾಗಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಅವರು ಹೇಳಿದರು.

    ಆದಿವಾಸಿಗಳು ಭಯಭೀತರಾಗಿದ್ದಾರೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಸ್ತಾರ್‌ನ ಆದಿವಾಸಿಗಳು ಭಯಭೀತರಾಗಿದ್ದಾರೆ. ಬುಡಕಟ್ಟು ಪ್ರದೇಶಗಳಲ್ಲಿ, ತಾಯಂದಿರು ಮತ್ತು ಸಹೋದರಿಯರು ಕಾಡಿಗೆ ಹೋಗಲು ಭಯ ಪಡುವಂತಾಗಿದೆ. ರಸ್ತೆಗಳು ಸುರಕ್ಷಿತವಾಗಿಲ್ಲ, ನಕಲಿ ಎನ್‌ಕೌಂಟರ್‌ಗಳು ಹೆಚ್ಚಿವೆ. ಅವರ ವಿರುದ್ಧ ನಕಲಿ ನಕ್ಸಲೀಯರ ಹೆಸರಿನಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಸ್ತಾರ್‌ನ ಆದಿವಾಸಿಗಳು ಎಲ್ಲೋ ಆತಂಕಕ್ಕೊಳಗಾಗಿದ್ದಾರೆ ಮತ್ತು ಸರ್ಕಾರದ ಉದ್ದೇಶಗಳು ಸ್ಪಷ್ಟವಾಗಿಲ್ಲ, ಮತ್ತು ಅಧಿಕಾರಿಗಳು ಒಂದೊಂದು ರೀತಿ ಹೇಳುತ್ತಿದ್ದಾರೆ, ಆದ್ದರಿಂದ ಸರ್ಕಾರ ಮತ್ತು ಅದರ ಅಧಿಕಾರಿಗಳಲ್ಲೇ ಗೊಂದಲವಿದೆ ಎಂದು ಆರೋಪ ಮಾಡಿದರು.

    ದುಬೈ, ಲಂಡನ್‌ನಲ್ಲಿ ಐಷಾರಾಮಿ ಮನೆ; ಗೋವಾ ಬಿಜೆಪಿ ಅಭ್ಯರ್ಥಿ ಆಸ್ತಿಯ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts