More

    ದುಬೈ, ಲಂಡನ್‌ನಲ್ಲಿ ಐಷಾರಾಮಿ ಮನೆ; ಗೋವಾ ಬಿಜೆಪಿ ಅಭ್ಯರ್ಥಿ ಆಸ್ತಿಯ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ!

    ಮಾರ್ಗೋವಾ (ಗೋವಾ): ದೇಶದಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಮಂಗಳವಾರ ದಕ್ಷಿಣ ಗೋವಾ ಬಿಜೆಪಿ ಅಭ್ಯರ್ಥಿಯಾಗಿ ಪಲ್ಲವಿ ಶ್ರೀನಿವಾಸ್‌ ಡೆಂಪೊ ಉಮೇದುವಾರಿಕೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ರಾಮನವಮಿಯಂದು ‘ಆಪ್​ ಕಾ ರಾಮರಾಜ್ಯ’ ವೆಬ್​ಸೈಟ್ ತೆರೆದ ಎಎಪಿ!

    ಚುನಾವಣಾಧಿಕಾರಿಯ ಮುಂದೆ ಅವರು ಸಲ್ಲಿಸಿದ 119 ಪುಟಗಳ ಅಫಿಡವಿಟ್‌ನಲ್ಲಿ ಪತಿ-ಪತ್ನಿ ಬಳಿ 1,400 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಬಿಜೆಪಿ ಪರ ಅಭ್ಯರ್ಥಿ ಪಲ್ಲವಿ ಅವರ ಪತಿ ಶ್ರೀನಿವಾಸ್​ ಡೆಂಪೊ ಅವರು, ರಾಜಕೀಯ ಗ್ರೀನ್‌ಹಾರ್ನ್, ಫುಟ್‌ಬಾಲ್‌, ರಿಯಲ್ ಎಸ್ಟೇಟ್‌, ಹಡಗು ನಿರ್ಮಾಣ, ಶಿಕ್ಷಣ, ಗಣಿಗಾರಿಕೆ ಸೇರಿ ಹಲವು ವ್ಯಾಪಾರ ವಹಿವಾಟುನಲ್ಲಿ ಗುರುತಿಸಿಕೊಂಡಿರುವ ಅವರು ಡೆಂಪೊ ಸಮೂಹದ ಅಧ್ಯಕ್ಷರಾಗಿದ್ದಾರೆ.

    ಪಲ್ಲವಿ ಶ್ರೀನಿವಾಸ್ ಅವರು ಸುಮಾರು 255.4 ಕೋಟಿ ಮೌಲ್ಯದ ಚರಾಸ್ತಿ, ಅವರ ಪತಿ ಶ್ರೀನಿವಾಸ್ 994.8 ಕೋಟಿ ರೂ. ಚರಾಸ್ತಿ ಹೊಂದಿರುವುದಾಗಿ ತಮ್ಮ ಅಫಿಡವಿಟ್​ನಲ್ಲಿ ಘೋಷಿಸಿಕೊಂಡಿದ್ದಾರೆ. ಪಲ್ಲವಿ ಅವರ ಸ್ಥಿರಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ 28.2 ಕೋಟಿ ರೂ.ಗಳಾಗಿದ್ದರೆ, ಶ್ರೀನಿವಾಸ್ ಅವರ ಆಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ 83.2 ಕೋಟಿ ರೂ.ಆಗಿದೆ.

    ದುಬೈ, ಲಂಡನ್​ನಲ್ಲಿ ಅಪಾರ್ಟ್ಮೆಂಟ್: ಗಮನಿಸಿದ ವಿಷಯವೇನೆಂದರೆ ಗೋವಾ ಮತ್ತು ದೇಶದ ಇತರ ಭಾಗಗಳಲ್ಲಿ ತಮ್ಮ ಒಡೆತನದ ಮನೆಗಳು, ಕೃಷಿ ಹೊಂದಿದ್ದಾರೆ. ಇದಲ್ಲದೆ ದುಬೈನ ಸವನ್ನಾದಲ್ಲಿ ಡೆಂಪೋ ದಂಪತಿಗಳು ಜಂಟಿ ಒಡೆತನದಲ್ಲಿ ಅಪಾರ್ಟ್ಮೆಂಟ್ ಕೂಡ ಹೊಂದಿದ್ದಾರೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 2.5 ಕೋಟಿ ರೂ. ಆಗಿದೆ. ದುಬೈ ಮಾತ್ರವಲ್ಲದೆ ಲಂಡನ್‌ನಲ್ಲಿಯೂ ಅಪಾರ್ಟ್ಮೆಂಟ್ ಹೊಂದಿದ್ದು, ಇದರ ಪ್ರಸ್ತುರ ಮಾರುಕಟ್ಟೆ ಮೌಲ್ಯ ಅಫಿಡವಿಟ್ ಪ್ರಕಾರ 10 ಕೋಟಿ ರೂ. ಆಗಿದೆ.

    ಬಿಜೆಪಿ ಅಭ್ಯರ್ಥಿ ಚಿನ್ನದ ಪ್ರಿಯರು: ಪಲ್ಲವಿ ಅವರು ಚಿನ್ನದ ಪ್ರಿಯರು ಎಂಬುದು ಸ್ಪಷ್ಟವಾಗಿದೆ. ಅವರ ಬಳಿ 3.75 ಕೆಜಿ ಚಿನ್ನ ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ 5.7 ಕೋಟಿ ರೂ. ಎಂದು ಅಫಿಡವಿಟ್​​ನಲ್ಲಿ ತಿಳಿಸಿದ್ದಾರೆ. ಪಲ್ಲವಿ 2022-23ನೇ ಹಣಕಾಸು ವರ್ಷಕ್ಕೆ 10 ಕೋಟಿ ರೂಪಾಯಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೆ, ಶ್ರೀನಿವಾಸ್ ಅದೇ ವರ್ಷ 11 ಕೋಟಿ ರೂಪಾಯಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಲ್ಲವಿ ಅವರು ಪುಣೆ ವಿಶ್ವವಿದ್ಯಾಲಯದ ಎಂಐಟಿಯಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

     

    ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts