More

    ರಾಮನವಮಿಯಂದು ‘ಆಪ್​ ಕಾ ರಾಮರಾಜ್ಯ’ ವೆಬ್​ಸೈಟ್ ತೆರೆದ ಎಎಪಿ!

    ನವದೆಹಲಿ: ಶ್ರೀ ರಾಮನವಮಿಯ ಶುಭದಿನದಂದು ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ “ಆಪ್ ಕಾ ರಾಮ್ ರಾಜ್ಯ” ಎಂಬ ವೆಬ್‌ಸೈಟ್ ಅನ್ನು ಲೋಕಾರ್ಪಣೆಗೊಳಿಸಿದೆ.

    ಇದನ್ನೂ ಓದಿ: ಮುಂಬೈ: ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ! 

    ಲೋಕಸಭೆ ಚುನಾವಣೆಗೆ ಮುನ್ನ ವೆಬ್‌ಸೈಟ್ ಬಿಡುಗಡೆ ಮಾಡಲಾಗಿದ್ದು, ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಇಂದು ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎಎಪಿಯ ಪ್ರಮುಖರು ವೆಬ್​ಸೈಟ್​ಗೆ ಚಾಲನೆ ನೀಡಿದರು. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಭಗವಾನ್ ಶ್ರೀರಾಮನ ಆದರ್ಶಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಎಪಿ ವಕ್ತಾರರು ಹೇಳಿದ್ದಾರೆ.

    ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್ ಅವರು, ರಾಮ ರಾಜ್ಯದ ಪರಿಕಲ್ಪನೆಯನ್ನು ಮತ್ತು ವಿಶೇಷವಾಗಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಪಕ್ಷದ ಜನರಪರ ಕೆಲಸಗಳನ್ನು ಜನರಿಗೆ ತಿಳಿಸಲು ವೆಬ್​ಸೈಟ್ ಸಹಕಾರಿಯಾಗಲಿದೆ ಎಂದು ಹೇಳಿದರು.

    ಮುಖ್ಯಮಂತ್ರಿ ಅರವಿಂದ್​ ಕ್ರೇಜಿವಾಲ್ ಅವರು ರಾಮರಾಜ್ಯವನ್ನು ಸಾಕಾರಗೊಳಿಸಲು ಕಳೆದ 10 ವರ್ಷಗಳಲ್ಲಿ ಹಲವು ಪ್ರಮುಖ ಕೆಲಸಗಳನ್ನು ಮಾಡಿದ್ದಾರೆ. ಉತ್ತಮ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ನೀರು ಮತ್ತು ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಸೇರಿ ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.

    ರಾಮ ನವಮಿಯ ಶುಭದಿನದಂದು ಅರವಿಂದ್ ಕೇಜ್ರಿವಾಲ್ ಅವರು ಜನರ ನಡುವೆ ಇಲ್ಲದಿರುವುದು ಇದೇ ಮೊದಲು. ಅವರ ವಿರುದ್ಧ ಅಧಾರ ರಹಿತ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಸಂಜಯ್ ಸಿಂಗ್ ಹೇಳಿದರು.

    ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts