More

    ಎಕ್ಸ್​​​ನಿಂದ ರಾಷ್ಟ್ರೀಯ ಭದ್ರತೆಗೆ ತೊಂದರೆ!: ಪಾಕಿಸ್ತಾನದಲ್ಲಿ ಟ್ಟಿಟರ್ ಖಾತೆಗೆ ನಿರ್ಬಂಧ​!

    ಕರಾಚಿ: ಪಾಕಿಸ್ತಾನ ತನ್ನ ದೇಶದಲ್ಲಿ ಟ್ಟಿಟರ್​ (ಎಕ್ಸ್‌)ನ್ನು ತಾತ್ಕಾಲಿಕವಾಗಿ ಬ್ಯಾನ್‌ ಮಾಡಿದೆ. ಪಾಕಿ​ಸ್ತಾನದ ಆಂತರಿಕ ಸಚಿವಾಲಯವು ಬುಧವಾರ ರಾಷ್ಟ್ರೀಯ ಭದ್ರತೆ ಕಾರಣ ಕೊಟ್ಟು ಎಕ್ಸ್​​​ನ್ನು ಬ್ಯಾನ್​​​ ಮಾಡಲಾಗಿದೆ.

    ಇದನ್ನೂ ಓದಿ: ಭೀಕರ ರಸ್ತೆ ಅಪಘಾತಕ್ಕೆ ಚೆಲ್ಲಿಹೋಯ್ತು ಪ್ರಾಣ: 10 ಮಂದಿಯ ದಾರುಣ ಸಾವು!

    ಕಳೆದ ಫೆಬ್ರವರಿಯಿಂದಲೇ ಈ ಬ್ಯಾನ್‌ ಜಾರಿಗೆ ಬಂದಿದ್ದು, ಈವರೆಗೂ ಅದನ್ನು ತೆಗೆದುಹಾಕಿಲ್ಲ. ಭವಿಷ್ಯದಲ್ಲಿ ಪಾಕಿಸ್ತಾನದಲ್ಲಿ ಎಕ್ಸ್‌ ಶಾಶ್ವತವಾಗಿ ಬ್ಯಾನ್‌ ಆಗಬಹುದು ಎಂದು ವರದಿಯಾಗಿದೆ. ಫೆಬ್ರವರಿ ಮಧ್ಯದಿಂದ ಪಾಕಿಸ್ತಾನದಲ್ಲಿ ಟ್ವಿಟರ್ ಎಂದು ಕರೆಯಲ್ಪಡುವ ಎಕ್ಸ್ಅನ್ನು ಬಳಸುವಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂದು ಯೂಸರ್‌ಗಳು ವರದಿ ಮಾಡುತ್ತಿದ್ದಾರೆ. ಆದರೆ, ಪಾಕಿಸ್ತಾನ ಮಾತ್ರ ಈ ಕುರಿತಾಗಿ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ.

    ಎಲೋನ್ ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ಸೈಟ್ ‘ಎಕ್ಸ್’ ಮೇಲಿನ ನಿಷೇಧವನ್ನು ರದ್ದುಗೊಳಿಸುವಂತೆ ಪಾಕಿಸ್ತಾನದ ಸಿಂಧ್ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಸುದ್ದಿ ಮೂಲಗಳ ಪ್ರಕಾರ, ಒಂದು ವಾರದೊಳಗೆ ತನ್ನ ನಿಷೇಧವನ್ನು ಹಿಂಪಡೆಯುವಂತೆ ನ್ಯಾಯಾಲಯವು ಪಾಕ್ ಸರ್ಕಾರವನ್ನು ಕೇಳಿದೆ.

    ಫೆಬ್ರವರಿ 8 ರಂದು ನಡೆದ ಪಾಕಿಸ್ತಾನ ಚುನಾವಣೆ ವೇಳೆ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ರಿಗ್ಗಿಂಗ್ ಆರೋಪದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರು ಎಲೋನ್ ಮಸ್ಕ್ ಒಡೆತನದ ಎಕ್ಸ್​ನಲ್ಲಿ ತಮ್ಮ ಖಾತೆ ತೆರೆಯಲು ಸಾಕಷ್ಟು ತೊಂದರೆ ಅನುಭವಿಸಿದ್ರು.

    ಪಾಕಿಸ್ತಾನ ಸರ್ಕಾರದ ಕಾನೂನುಬದ್ಧ ನಿರ್ದೇಶನಗಳಿಗೆ ಬದ್ಧವಾಗಿರಲು ಎಕ್ಸ್‌ ವಿಫಲವಾದ ಕಾರಣ ಮತ್ತು ಅದರ ಪ್ಲಾಟ್‌ಫಾರ್ಮ್‌ನ ದುರುಪಯೋಗದ ಬಗ್ಗೆ ಕಾಳಜಿಯನ್ನು ತಿಳಿಸಲು ನಿಷೇಧವನ್ನು ಹೇರುವುದು ಅಗತ್ಯವಾಗಿದೆ ಎಂದು ಇಲ್ಲಿ ಉಲ್ಲೇಖಿಸುವುದು ಬಹಳ ಪ್ರಸ್ತುತವಾಗಿದೆ ಎಂದು ವರದಿ ಮಾಡಲಾಗಿದೆ. ಈ ಕುರಿತಂತೆ ಎಕ್ಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ದುಬೈ, ಲಂಡನ್‌ನಲ್ಲಿ ಐಷಾರಾಮಿ ಮನೆ; ಗೋವಾ ಬಿಜೆಪಿ ಅಭ್ಯರ್ಥಿ ಆಸ್ತಿಯ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts