More

    ಇನ್ನೆಷ್ಟು ಸಹಿಸಿಕೊಳ್ಳೋದು? ಮುಂದಿನ ಸೀಸನ್​​ಗಾದ್ರು ಈ ಬದಲಾವಣೆ ತನ್ನಿ ಸಾಕು! RCB ಫ್ಯಾನ್ಸ್​ ಮನವಿ

    ಬೆಂಗಳೂರು: ನಿನ್ನೆ (ಏಪ್ರಿಲ್​ 21) ಕೋಲ್ಕತ್ತಾದ ಈಡೆನ್ ಗಾರ್ಡನ್​ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್​ ರೈಡರ್ಸ್ (ಕೆಕೆಆರ್​) ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಗಳ ನಡುವಿನ ಪಂದ್ಯವು ಬಹಳ ರೋಚಕವಾಗಿ ಮೂಡಿಬಂದಿತು. ಕಡೆಯ ಓವರ್​ವರೆಗೂ ಹೋದ ಭಾರೀ ಹಣಾಹಣಿಯ ಪಂದ್ಯದಲ್ಲಿ ಒಂದೇ ಒಂದು ರನ್​ನಿಂದ ಆರ್​ಸಿಬಿ ಗೆಲುವಿನ ಪತಾಕೆ ಹಾರಿಸುವಲ್ಲಿ ಎಡವಿತು. ಈ ಮೂಲಕ ಕೆಕೆಆರ್​ ತಮ್ಮ ಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳುವಲ್ಲಿ ಮತ್ತೊಮ್ಮೆ ಯಶಸ್ವಿಯಾಯಿತು.

    ಇದನ್ನೂ ಓದಿ: ಪತ್ನಿಯಿಂದ ನಾಗಚೈತನ್ಯ ದೂರವಾಗಲೂ ಇವಳೇ ಕಾರಣನಾ? ಅನುಮಾನಕ್ಕೆ ಕಾರಣವಾಯ್ತು ಈ ಒಂದು ಫೋಟೋ…

    ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಈ ವೇಳೆ ಬ್ಯಾಟಿಂಗ್​ಗೆ ಬಂದ ಕೆಕೆಆರ್​ ಬ್ಯಾಟ್ಸ್​ಮನ್​ಗಳು ಎಂದಿನಂತೆ ಆರ್​ಸಿಬಿ ವೇಗಿಗಳಿಗೆ ನೀರು ಕುಡಿಸುವಲ್ಲಿ ಯಶಸ್ವಿಯಾದರು. ಆರಂಭಿಕ ಹಂತದಿಂದಲು ಅಬ್ಬರಿಸಲು ಪ್ರಾರಂಭಿಸಿದ ಶ್ರೇಯಸ್​ ಅಯ್ಯರ್ ಪಡೆಯ ಬ್ಯಾಟ್ಸ್​ಮನ್​ಗಳು, ರನ್​ಗಳ ಸುರಿಮಳೆ ಹರಿಸಿ, 20 ಓವರ್​ಗಳಲ್ಲಿ 222 ಬೃಹತ್​ ಮೊತ್ತದ ಗುರಿಯನ್ನು ಆರ್​ಸಿಬಿಗೆ ಸವಾಲಾಗಿ ನೀಡಿದರು. ಇದನ್ನು ಬೆನ್ನಟ್ಟಿದ ಆರ್​ಸಿಬಿಗೆ ಆರಂಭಿಕ ಹಂತದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಹೋಗಿದ್ದು, ಅಭಿಮಾನಿಗಳಲ್ಲಿ ಭಾರೀ ಆಘಾತ ತಂದಿತು. ಇದು ಅಂಪೈರ್ ಮಾಡಿದ ಮೋಸ ಎಂದು ಒಂದಷ್ಟು ಕ್ರಿಕೆಟ್ ಫ್ಯಾನ್ಸ್ ವಾದಿಸಿದರೆ, ಇನ್ನು ಕೆಲವರು ಇರಬಹುದೇನೋ ಎಂದು ತೀರ್ಪನ್ನು ಒಪ್ಪಿಕೊಂಡರು.

    ಕಡೆಯ ಓವರ್​ವರೆಗೂ ಹೋದ ಪಂದ್ಯದಲ್ಲಿ ಆರ್​ಸಿಬಿಯ ಬ್ಯಾಟ್ಸ್​ಮನ್​ಗಳಾದ ದಿನೇಶ್ ಕಾರ್ತಿಕ್, ಕರುಣ್, ವಿಲ್ ಜ್ಯಾಕ್ಸ್​ ಮತ್ತು ರಜತ್ ಪಟಿದರ್​ ಆರ್ಭಟದಿಂದ ಪಂದ್ಯವು ಗೆಲುವಿನ ಹಂತಕ್ಕೆ ತಲುಪಿ, ಆರ್​ಸಿಬಿ ಅಭಿಮಾನಿಗಳಲ್ಲಿ ಭಾರೀ ಕೌತುಕ ಹೆಚ್ಚಿಸಿತು. ಆದರೆ, ಅಂತಿಮವಾಗಿ ಒಂದು ರನ್​ಗಳಿಂದ ಚಾಲೆಂಜರ್ಸ್​ ಸೋಲನ್ನು ಅನುಭವಿಸಿತು. ಇದು ಎಂದಿನಂತೆ ಬೆಂಗಳೂರು ಅಭಿಮಾನಿಗಳಿಗೆ ಅತೀವ ಬೇಸರವನ್ನು ತಂದೊಡ್ಡಿತು. ಇದರಿಂದ ಕಂಗಾಲಾದ ಫ್ಯಾನ್ಸ್​ ನಮಗೆ ಫ್ಯಾಂಚೈಸಿ ಬದಲಾವಣೆ ಬೇಕಿದೆ ಎಂದು ಆಗ್ರಹಿಸಿದ್ದಾರೆ!

    ಇದನ್ನೂ ಓದಿ: ನಡುರಸ್ತೆಯಲ್ಲಿ ಜುಟ್ಟು ಹಿಡಿದು ಕಿತ್ತಾಡಿಕೊಂಡ ಯುವತಿಯರು; ಓ..ಹೆಣ್ಮಗು ಹೆಣ್ಣು ಮಗು ಎಂದ್ರು ನೆಟ್ಟಿಗರು

    ಈ ಬಾರಿಯ ಐಪಿಎಲ್ ಸೀಸನ್​ನ ಮೊದಲ ಪಂದ್ಯದಲ್ಲಿ ಎಡವಿದ ಆರ್​ಸಿಬಿ, ಎರಡನೇ ಪಂದ್ಯವನ್ನು ಗೆದ್ದಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಸತತವಾಗಿ ಸೋಲನ್ನು ಕಂಡಿತು. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಇಂತಹ ಹೀನಾಯ ಸೋಲುವಂತ ಪರಿಸ್ಥಿತಿ ಏನಿತ್ತು? ಫ್ಯಾಂಚೈಸಿಗೆ ಬಂದಿರುವ ತೊಂದರೆ ಏನು? ಬೌಲಿಂಗ್ ಯೂನಿಟ್ ಬಲಿಷ್ಠವಿಲ್ಲ, ಯಾರನ್ನು, ಯಾವಾಗ ಮೈದಾನಕ್ಕೆ ಇಳಿಸಬೇಕು ಎಂಬ ಪ್ಲಾನಿಂಗ್ ಮ್ಯಾನೆಜ್​ಮೆಂಟ್​ಗಿಲ್ಲ. ಇದು ಆರ್​ಸಿಬಿಯಲ್ಲೇ ಏಕೆ ಎಂದು ಫ್ಯಾನ್ಸ್ ನೇರವಾಗಿ ಪ್ರಶ್ನಿಸಿದ್ದಾರೆ.

    ಮುಂದಿನ ಐಪಿಎಲ್ ಸೀಸನ್​ನಲ್ಲಿ ಬೆಂಗಳೂರು ತಂಡಕ್ಕೆ ಹೊಸ ಫ್ಯಾಂಚೈಸಿಯ ಅಗತ್ಯವಿದೆ. ಈಗ ತಂಡದಲ್ಲಿರುವವರನ್ನು ಫಿಲ್ಟರ್​ ಮಾಡಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರನ್ನು ಬ್ಯಾಲೆನ್ಸ್​ ಮಾಡುವಂತ ಫ್ಯಾಂಚೈಸಿ ಬೇಕಿದೆ. ನಮ್ಮಂತ ನಿಷ್ಠಾವಂತ, ನಿಯತ್ತಿನ ಅಭಿಮಾನಿಗಳಿಗೆ ಖಂಡಿತ ಐಪಿಎಲ್​ ಕಪ್ ಸಿಗಬೇಕಿದೆ. ನಾವುಗಳು ಅದಕ್ಕೆ ಅರ್ಹರಿದ್ದೇವೆ ಎಂದು ಆರ್​ಸಿಬಿ ಫ್ಯಾಂಚೈಸಿ ವಿರುದ್ಧ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts