VIDEO | ಸೀಟ್​​ಗಾಗಿ 'ಶಕ್ತಿ' ಪ್ರಯೋಗ: ಬಸ್​​ನೊಳಗೇ ಜಡೆ ಹಿಡಿದು ಜಗಳವಾಡಿದ ಮಹಿಳೆಯರು!

Shakthi Scheme
Published on

ಬೆಂಗಳೂರು: ಕಾಂಗ್ರೆಸ್​ನ ಗ್ಯಾರಂಟಿಗಳ ಪೈಕಿ ಒಂದಾಗಿರುವ, ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್​ನಲ್ಲಿ ಮಹಿಳೆಯರು ಜಗಳ ಮಾಡಿಕೊಂಡ ಹಲವಾರು ಪ್ರಕರಣಗಳು ನಡೆದಿವೆ. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಸೀಟ್​ಗಾಗಿ ಮಹಿಳೆಯರಿಬ್ಬರು ಭಾರಿ 'ಶಕ್ತಿ' ಪ್ರಯೋಗಿಸಿದ್ದಾರೆ.

ತುಮಕೂರು ಸರ್ಕಾರಿ ಬಸ್​ ನಿಲ್ದಾಣದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಬಸ್​ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದು, ತುಮಕೂರಿನಲ್ಲಿ ಕೆಲಕಾಲ ನಿಂತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ವಾಶ್​ರೂಮ್​ಗೆ ಹೋಗಿ ಬರುವಷ್ಟರಲ್ಲಿ ಇನ್ನೊಬ್ಬಾಕೆ ಅಲ್ಲಿ ಆ ಸೀಟ್​​ನಲ್ಲಿ ಬಂದು ಕುಳಿತಿದ್ದರು ಎಂಬ ಕಾರಣಕ್ಕೆ ಈ ಜಗಳ ನಡೆದಿದೆ.

ಇವರಿಬ್ಬರು ಜಡೆ ಹಿಡಿದು ಜಗಳ ಮಾಡಿಕೊಂಡಿದ್ದು, ಬಿಡಿಸಲು ಹೋದ ಕಂಡಕ್ಟರ್​​ಗೂ ಡೋಂಟ್​ ಕೇರ್ ಎಂದಿದ್ದಾರೆ. ಬಳಿಕ ಬೇರೆ ದಾರಿ ಇಲ್ಲದೆ ತುಮಕೂರು ಟೌನ್ ಪೋಲಿಸ್ ಠಾಣೆಯತ್ತ ಬಸ್​ ಚಲಾಯಿಸಿ, ಚಾಲಕ-ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ಗಮನಕ್ಕೆ ತಂದು ಬಳಿಕ ಬಸ್​ ಪ್ರಯಾಣ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net