More

    ವೇತನ ಪಡೆಯುವವರ ಮೇಲೆ ನಿಗಾ ಇರಿಸಿದ್ದಾರಂತೆ ಆದಾಯ ತೆರಿಗೆ ಅಧಿಕಾರಿಗಳು!; ಕಾರಣ?

    ಬೆಂಗಳೂರು: ಇನ್​ಕಮ್​ ಟ್ಯಾಕ್ಸ್ ರಿಟರ್ನ್ಸ್​ ಪಾವತಿಸಲು ಈ ತಿಂಗಳ 31ನೇ ತಾರೀಕು ಕೊನೇ ದಿನ. ಅದಕ್ಕೆ ಇನ್ನೊಂದು ವಾರವಷ್ಟೇ ಉಳಿದಿದ್ದು, ಈಗಾಗಲೇ ಹಲವರು ಐಟಿ ರಿಟರ್ನ್ಸ್ ಸಲ್ಲಿಕೆಗೆ ತರಾತುರಿಯಲ್ಲಿ ಸಜ್ಜಾಗುತ್ತಿದ್ದಾರೆ.

    ಮತ್ತೊಂದೆಡೆ ಹೀಗೆ ಐಟಿ ರಿಟರ್ನ್ಸ್​ ಸಲ್ಲಿಸುತ್ತಿರುವ ವೇತನದಾರರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ವಿಶೇಷ ನಿಗಾ ಇರಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದರಲ್ಲೂ ಕೆಲವರಿಗೆ ಈ ಸಂಬಂಧ ನೋಟಿಸ್ ಜಾರಿಯಾಗಿದೆ ಎನ್ನಲಾಗಿದೆ.

    ಕೆಲವು ವೇತನದಾರರು ಇನ್​ಕಂ ಟ್ಯಾಕ್ಸ್​ ರಿಟರ್ನ್ಸ್​ಗಾಗಿ ನಕಲಿ ರೆಂಟ್ ರಿಸೀಪ್ಟ್​ಗಳನ್ನು ನೀಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಲ್ಲದೆ ಕೆಲವರು ದೇಣಿಗೆ, ಗೃಹಸಾಲ ಕುರಿತು ಕೂಡ ನಕಲಿ ದಾಖಲೆಗಳನ್ನು ಸಲ್ಲಿಸುತ್ತಿರುವುದರಿಂದ ಆದಾಯ ತೆರಿಗೆ ಅಧಿಕಾರಿಗಳು ಐಟಿ ರಿಟರ್ನ್ಸ್​ ದಾಖಲೆಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದಾರೆ ಎನ್ನಲಾಗಿದೆ. –ಏಜೆನ್ಸೀಸ್

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts