ಇದೊಂದೇ ವಿಷಯಕ್ಕೆ ಅತ್ತೆಯಿಂದ ದಿನನಿತ್ಯ ಚಿತ್ರಹಿಂಸೆ! ಬೇಸತ್ತ ಸೊಸೆ ಆತ್ಮಹತ್ಯೆಗೆ ಶರಣು

ವಿಜಯವಾಣಿ-2024-07-24T150343.152
Published on

ಪಂಜಾಬ್: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪಂಜಾಬ್​ ಮೂಲದ ಮಹಿಳೆ ನಿರ್ಮಲಾ ಕೌರ್​, ತವರು ಮನೆ ತೊರೆದು ಗಂಡನ ಮನೆಯೇ ದೇವಾಲಯ, ಅವರ ಅಪ್ಪ-ಅಮ್ಮ ನಮ್ಮ ಪೋಷಕರಂತೆ ಎಂದು ಭಾವಿಸಿ, ಹತ್ತಾರು ಕನಸು ಕಂಡು ಮದುವೆಯಾಗಿದ್ದಳು. ಆದ್ರೆ, ವಿವಾಹವಾಗಿ ಕೆಲವೇ ದಿನಗಳಲ್ಲಿ ಗಂಡನ ತಾಯಿ ತನ್ನ ಅಸಲಿ ಮುಖ ತೋರಲು ಶುರುಮಾಡಿದ್ದನ್ನು ಕಂಡು ಆಕೆ ತೀವ್ರ ಆಘಾತಕ್ಕೊಳಗಾಗಿದ್ದಳು. ಅತ್ತೆಯ ನಿರಂತರ ಕಾಟಕ್ಕೆ ಮನನೊಂದ ಯುವತಿ ಸಾವಿಗೆ ಶರಣಾಗುವ ಮೂಲಕ ಆಕೆಯ ಚಿತ್ರಹಿಂಸೆಯಿಂದ ಮುಕ್ತಿ ಪಡೆದಿದ್ದಾಳೆ.

ಗಂಡನ ಮನೆಗೆ ಹೋದ ದಿನದಿಂದಲೂ ಆಕೆಗೆ ನೀನು ಕಪ್ಪು ಬಣ್ಣ ಇದ್ದೀಯಾ ಎಂದು ತಾರತಮ್ಯ ಮಾಡಿದ್ದಾರೆ. ದಿನ ಬೆಳಗಾದರೆ ಇದೇ ವಿಷಯವನ್ನು ಮುಂದಿಟ್ಟು ಹೀಯಾಳಿಸಿ, ಚಿತ್ರಹಿಂಸೆ ಕೊಡುತ್ತಿದ್ದ ಅತ್ತೆಯಿಂದ ಬಹಳ ನೋವಿಗೆ ಒಳಗಾಗಿದ್ದ ನಿರ್ಮಲಾಗೆ ಪತಿ ಹಾಗೂ ಆತನ ಮನೆಯವರು ಸಾಂತ್ವನ ಹೇಳುವಲ್ಲಿ ವಿಫಲರಾಗಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡು ಮನೆಯಲ್ಲಿದ್ದರು ಬಿಡದ ಅತ್ತೆ, ಆಕೆಯನ್ನು ತವರು ಮನೆಗೆ ಹೋಗುವಂತೆ ಹೊರನೂಕಿದ್ದಾರೆ ಎಂದು ಮೃತ ಯುವತಿಯ ತಾಯಿ ಪೊಲೀಸರ ಬಳಿ ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, ಮನೆಯಿಂದ ಹೊರಹಾಕಿದ ಅತ್ತೆ ಹಾಗೂ ಗಂಡನ ಕುಟುಂಬದವರಿಂದ ತೀವ್ರ ಬೇಸತ್ತ ನಿರ್ಮಲಾ, ನೀರು ಹರಿಯುತ್ತಿದ್ದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ಯುವತಿಯ ಅತ್ತೆ ಮತ್ತು ಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net