ಹಾಸಿಗೆಯಿಂದ ಕೆಳಗೆ ಬಿದ್ದ 160 ಕೆಜಿ ತೂಕದ ಮಹಿಳೆ; ಆಕೆಯನ್ನು ಮೇಲೆತ್ತಲು ಅಗ್ನಿಶಾಮಕ ಇಲಾಖೆಯ ಸಹಾಯ ಕೋರಿದ ಕುಟುಂಬ

bed
Published on

ಮಹಾರಾಷ್ಟ್ರ: 160 ಕೆಜಿ ತೂಕದ ಅಸ್ವಸ್ಥ ಮಹಿಳೆಯೊಬ್ಬರು ಹಾಸಿಗೆಯಿಂದ ಬಿದ್ದ ನಂತರ ಆಕೆಯನ್ನು ಮೇಲೆತ್ತಲು ಗುರುವಾರ ಮಹಾರಾಷ್ಟ್ರದ ಥಾಣೆ ನಗರದ ಕುಟುಂಬವು ಅಗ್ನಿಶಾಮಕ ಇಲಾಖೆಯ ಸಹಾಯವನ್ನು ಕೋರಿದೆ.

160 ಕೆಜಿ ತೂಕದ ಅಸ್ವಸ್ಥ ಮಹಿಳೆ ತನ್ನ ಹಾಸಿಗೆಯಿಂದ ಬಿದ್ದ ಘಟನೆ ಗುರುವಾರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಸಂಭವಿಸಿದೆ. ತೂಕವುಳ್ಳ ಆಕೆಯನ್ನು ಮೇಲೆತ್ತಲು ಕುಟುಂಬವು ಅಗ್ನಿಶಾಮಕ ಇಲಾಖೆಯ ಸಹಾಯವನ್ನು ಕೋರಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಅನಾರೋಗ್ಯದ ಕಾರಣ ಮಹಿಳೆಗೆ ಹಾಸಿಗೆಯಿಂದ ಎದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ 62 ವರ್ಷದ ಮಹಿಳೆ ವಾಘ್ಬಿಲ್ ಪ್ರದೇಶದಲ್ಲಿನ ತಮ್ಮ ಫ್ಲಾಟ್‌ನಲ್ಲಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಹಾಸಿಗೆಯಿಂದ ಬಿದ್ದಿದ್ದಾಳೆ. ಆದರೆ, ಆಕೆಯ ಕುಟುಂಬ ಸದಸ್ಯರಿಗೆ ಆಕೆಯನ್ನು ಬೆಡ್ ಮೇಲೆ ಎತ್ತಿ ಮಲಗಿಸಲು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಭಯಭೀತರಾದ ಕುಟುಂಬ ಸದಸ್ಯರು ಅಗ್ನಿಶಾಮಕ ಅಧಿಕಾರಿಗಳನ್ನು ಕರೆಸಿದ್ದಾರೆ.

ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್‌ಡಿಎಂಸಿ) ತಂಡವು ಫ್ಲಾಟ್‌ಗೆ ಧಾವಿಸಿ, ಮಹಿಳೆಯನ್ನು ಮೇಲಕ್ಕೆತ್ತಿ ಹಾಸಿಗೆಯ ಮೇಲೆ ಇರಿಸಿದೆ. ಬಿದ್ದ ಕಾರಣ ಮಹಿಳೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಥಾಣೆ ನಗರದ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net