ಆಸೆ ಈಡೇರಿಸದ ಶಿವನ ಮೇಲೆ ಕೋಪಗೊಂಡ ಯುವಕ, ದೇವಸ್ಥಾನದಲ್ಲಿದ್ದ ಶಿವಲಿಂಗವನ್ನೇ ಕದ್ದ!

UP Man Steals Shivling From Temple After His prayers Were Not Answered
ಸಾಂದರ್ಭಿಕ ಚಿತ್ರ
Published on

ಉತ್ತರಪ್ರದೇಶ: ಜನರು ದೇವರ ಬಳಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಬಯಸಿದ ಆಸೆ ಈಡೇರದಿದ್ದರೆ ಬೇಸರವಾಗುವುದು ಸಹಜ. ಆದರೆ ಇಲ್ಲೊಬ್ಬ ಯುವಕನೊಬ್ಬ ತನ್ನ ಆಸೆಯನ್ನು ಈಡೇರಿಸದ ಕಾರಣಕ್ಕೆ ಸಿಟ್ಟಿನಿಂದ ಮಾಡಿರುವ ಕೆಲಸ ಎಲ್ಲಡೆ ಸುದ್ದಿಯಾಗಿದೆ.

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಚೋಟು ಎಂಬ 27 ವರ್ಷದ ಯುವಕ ತಮ್ಮ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಮನೆಗೆ ಹೋಗಿ ಕೇಳಿದ್ದಾನೆ. ಆದರೆ ಆಕೆ ಮನೆಯವರು ಒಪ್ಪಿಲ್ಲ.  ಹೀಗಾಗಿ ಯುವಕ ಗ್ರಾಮದ ಶಿವನ ದೇವಸ್ಥಾನಕ್ಕೆ ಹೋಗಿ ನಾನು ಪ್ರೀತಿಸುವ ಹುಡುಗಿ ನನಗೆ ಸೀಗಬೇಕು ಎಂದು ದೇವರಲ್ಲಿ ಬೇಡಿಕೊಂಡನು. ತಾನು ಬಯಸಿದ್ದನ್ನು ನನಗೆ ನೀಡುವಂತೆ ಅವನು ಪ್ರತಿದಿನ ಶಿವನನ್ನು ಪ್ರಾರ್ಥಿಸುತ್ತಿದ್ದನು. ಹೀಗೆ ನಿತ್ಯವೂ ಒಂದು ತಿಂಗಳ ಕಾಲ ದೇವಸ್ಥಾನದ ಪ್ರದಕ್ಷಿಣೆ ಹಾಕಿ ಬೇಡುತ್ತಿದ್ದನು. ಹುಡುಗಿಯ ಪೋಷಕರು ಮದುವೆಗೆ ಒಪ್ಪುತ್ತಾರೆ ಎಂದು ನಂಬಿದ್ದ. ಅದೇ ನಂಬಿಕೆಯಿಂದ ಹುಡುಗಿ ಮನೆಗೆ ಹೋಗಿ ಮತ್ತೆ ಕೇಳಿದ್ದಾನೆ. ಆದರೆ ಅವರು ಒಪ್ಪಲಿಲ್ಲ. ಆಗ ಯುವಕ ನೇರವಾಗಿ ದೇವಸ್ಥಾನಕ್ಕೆ ಹೋಗಿದ್ದಾನೆ.

ಒಂದು ತಿಂಗಳಿನಿಂದ ಪ್ರತಿದಿನ ನಿನ್ನ ದೇವಸ್ಥಾನಕ್ಕೆ ಬಂದು ಬೇಡಿಕೊಂಡೆ.. ಆದರೆ ನೀನು ಕರುಣೆ ತೋರಲಿಲ್ಲ.. ನೀನೇ ದೇವರೇ...?ಭಕ್ತರ ನೋವನ್ನು ವಾಸಿಮಾಡಲಾರದ ನಿನ್ನನ್ನು ಪೂಜಿಸುವುದೇಕೆ..? ಎಂದು ಹೇಳುತ್ತಾ ಕೋಪದಿಂದ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಎತ್ತಿಕೊಂಡು ಹೊರಗೆ ಬಂದು ಪೊದೆಗಳಲ್ಲಿ ಲಿಂಗವನ್ನು ಬಚ್ಚಿಟ್ಟಿದ್ದಾನೆ.

ಮರುದಿನ ದೇವಸ್ಥಾನದಲ್ಲಿ ಶಿವಲಿಂಗ ಕಾಣದೇ ಗ್ರಾಮಸ್ಥರು ಆತಂಕಗೊಂಡಿದ್ದರು. ಮಹೇವ ಘಾಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ತಮ್ಮ ತಂಡದೊಂದಿಗೆ ಬಂದ ಪೊಲೀಸರು ಗ್ರಾಮಸ್ಥರನ್ನು ವಿಚಾರಿಸಿದ್ದು, ಚೋಟು ಪ್ರತಿದಿನ ದೇವಸ್ಥಾನಕ್ಕೆ ಬಂದು ಮದುವೆಗಾಗಿ ಪ್ರಾರ್ಥಿಸುತ್ತಿದ್ದ ಎಂದು ತಿಳಿಸಿದ್ದಾರೆ.

ಪೊಲೀಸರು ಸ್ಥಳದ ಅನುಮಾನದ ಮೇಲೆ ಸೆಪ್ಟೆಂಬರ್ 3 (2023) ರಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಲಿಂಗವನ್ನು ತೆಗೆದುಕೊಂಡು ಹೋಗಿ ಪೊದೆಗಳಲ್ಲಿ ಬಚ್ಚಿಟ್ಟಿದ್ದೇನೆ ಎಂದು ಹೇಳಿದನು. ಪೊಲೀಸರು ಲಿಂಗವನ್ನು ವಶಪಡಿಸಿಕೊಂಡು ಗ್ರಾಮಸ್ಥರಿಗೆ ಒಪ್ಪಿಸಿ, ಅದನ್ನು ತೆಗೆದುಕೊಂಡು ಹೋಗಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net