More

    ತಂದೆಯಾದ 3 ತಿಂಗಳಿಗೆ ಗರ್ಲ್​​ಫ್ರೆಂಡ್​ನಿಂದ ದೂರವಾದ 83 ವರ್ಷದ ನಟ; ಮಗುವನ್ನು ಇಬ್ಬರ ಸುಪರ್ದಿಗೆ ನೀಡುವಂತೆ ಕೋರ್ಟ್​ ಮೊರೆ

    ಅಮೆರಿಕಾ: ಹಾಲಿವುಡ್​ನ ಖ್ಯಾತ ನಟ ಅಲ್ ಪಚಿನೋ 83ನೇ ವಯಸ್ಸಿನಲ್ಲಿ 29 ವರ್ಷದ ಗೆಳತಿ ನೂರ್ ಅಲ್ಫಲ್ಲಾ ಅವರಿಂದ ಮಗು ಪಡೆಯುವ ಮೂಲಕವಾಗಿ ಸುದ್ದಿಯಾಗಿದ್ದರು. ಆದರೆ ಇದೀಗ ಈ ಜೋಡಿ ವಿಚ್ಛೇಧನ ಪಡೆದುಕೊಂಡಿದ್ದಾರೆ.

    ಗರ್ಲ್​ಫ್ರೆಂಡ್​ ನೂರ್​ ಅಲ್ಫಾಲ್ಲಾ ಜತೆ ಅಲ್ ಪಚಿನೋ ಸುತ್ತಾಟ ನಡೆಸುತ್ತಿದ್ದರು. ನೂರ್​ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿತ್ತು. ಆ ಬಳಿಕ ಅಲ್​ ಪಚಿನೋ ಅವರಿಗೆ ಒಂದು ಅನುಮಾನ ಮೂಡಿತ್ತು. ಮಗುವಿಗೆ ತಂದೆ ನಾನೇ ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು. ಹೀಗಾಗಿ ಮಗುವಿನ ಡಿಎನ್​ಎ ಟೆಸ್ಟ್​ ಮಾಡಿಸಿದ್ದರು. ಆ ಬಳಿಕ ಅಲ್ ಪಚಿನೋ ಅವರೇ ತಂದೆ ಎಂಬುದು ಖಚಿತವಾಯಿತು. ನಂತರ ನೂರ್​ ಅಲ್ಫಾಲ್ಲಾ ಮಗುವಿಗೆ ಜನ್ಮವನ್ನು ಕೊಟ್ಟಿದ್ದಾರೆ. ಈಗ ಮೂರು ತಿಂಗಳ ಬಳಿಕ ಬ್ರೇಕಪ್ ವಿಚಾರ ಹೊರ ಬಿದ್ದಿದೆ.

    ಮಗು ರೋಮನ್ ಅಲ್ಫಲ್ಲಾ ಪಚಿನೋನನ್ನು ಪೋಷಕರ ಜಂಟಿ ಸುಪರ್ದಿಗೆ ಒಪ್ಪಿಸಬೇಕೆಂದು ನೂರ್ ಅಲ್ಫಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
    ಲಾಸ್ ಏಂಜಲೆಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ನೂರ್, ಮಗುವಿನ ಶಕ್ಷಣ, ಧರ್ಮ ಸೇರಿದಂತೆ ಹಲವು ವಿಚಾರಗಳಲ್ಲಿ ಅಲ್ ಇಬ್ಬರೂ ತೀರ್ಮಾನ ತೆಗೆದುಕೊಳ್ಳುವಂತೆ ಮಗುವನ್ನು ಜಂಟಿ ಸುಪರ್ದಿಗೆ ನೀಡುವಂತೆ ಕೋರಿದ್ದಾರೆ. ಮಗು ಹುಟ್ಟಿದ ಆರನೇ ದಿನ ಇಬ್ಬರೂ ಸಹಿ ಮಾಡಿದ್ದರು ಎನ್ನಲಾಗುತ್ತಿದೆ.

    ಮೂರು ತಿಂಗಳ ಹಿಂದೆ ನೂರ್​ ಅಲ್ಫಾಲ್ಲಾ  ಗಂಡುಮಗುವಿಗೆ ಜನ್ಮನೀಡಿದ್ದರು. ಈಗ ಇಬ್ಬರೂ ಬೇರೆ ಆಗಿದ್ದಾರೆ ಎಂದು ವರದಿ ಆಗಿದೆ. ಸದ್ಯ ಈ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಮಗುವಿಗೆ ರೋಮನ್​ ಪಚಿನೋ ಎಂದು ಹೆಸರು ಇಡಲಾಗಿದೆ.

    ಕೃಷ್ಣಾಷ್ಟಮಿ ದಿನದಂದು 1000ಕ್ಕೂ ಹೆಚ್ಚು ಮಕ್ಕಳ ಜನನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts