ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ಯುವತಿಯನ್ನು ಎಳೆದೊಯ್ದು ಗ್ಯಾಂಗ್​ರೇಪ್​ ಮಾಡಿದ ಕಾಮುಕರು!

rape
Published on

ನವದೆಹಲಿ: ಅಪ್ಪ ಅಮ್ಮನ ಜತೆ ಜಗಳವಾಡಿಕೊಂಡು ಸಿಟ್ಟಿನಿಂದ ರೈಲ್ವೆ ನಿಲ್ದಾಣಕ್ಕೆ ಬಂದು ಕುಳಿತಿದ್ದ ಯುವತಿಯನ್ನು ರೈಲ್ವೆ ನಿಲ್ದಾಣದಿಂದ ಎಳೆದೊಯ್ದು ಗ್ಯಾಂಗ್​ ರೇಪ್​ ಮಾಡಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

22 ವರ್ಷದ ಯುವತಿ ಗುರುವಾರ ತನ್ನ ಕುಟುಂಬದೊಂದಿಗೆ ಜಗಳವಾಡಿದ್ದು, ಹತ್ತಿರದ ಶಕುರ್​ ಬಸ್ತಿ ರೈಲ್ವೆ ನಿಲ್ದಾಣಕ್ಕೆ ಬಂದು ಕುಳಿತಿದ್ದಾಳೆ. ಅಲ್ಲಿದ್ದ ಮೂವರು ಯುವಕರು ಆಕೆಯನ್ನು ಗಮನಿಸಿದ್ದು, ಆಕೆಯ ಬಳಿ ಹೋಗಿದ್ದಾರೆ.

ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದಾರೆ. ಯುವತಿ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಅಕೆಯನ್ನು ಅಲ್ಲಿಂದ ಎಳೆದೊಯ್ಯಲಾಗಿದೆ. ಅಲ್ಲೇ ಹತ್ತಿರದ ಸ್ಥಳಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಮತ್ತೆ ತೊಂದರೆ ನೀಡುವುದಾಗಿ ಬೆದರಿಸಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸ್ವಲ್ಪ ಸಮಯದ ನಂತರ ಮನೆಗೆ ಮರಳಿದ ಯುವತಿ ನಡೆದ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳ ಹುಡುಕಾಟಕ್ಕೆ ವಿಶೇಷ ತಂಡ ರಚಿಸಲಾಗಿದೆ. ಯುವತಿಯ ವೈದ್ಯಕೀಯ ವರದಿ ಬಂದ ನಂತರ ತನಿಖೆ ತೀವ್ರಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net