ಬೆಳಿಗ್ಗೆ ಅಂತ್ಯಸಂಸ್ಕಾರ ಮಾಡಿದರು; ಸತ್ತವ ರಾತ್ರಿಯೆನ್ನುವಷ್ಟರಲ್ಲಿ ಎದ್ದು ಬಂದ! ಆತ ಬದುಕಿದ್ದು ಹೇಗೆ ಗೊತ್ತಾ?

ದೆಅಧ
Published on

ಭೋಪಾಲ್​: ಸತ್ತವರು ಬದುಕಿ ಬಂದರೆ ಸಂತೋಷವಾಗುತ್ತದೆಯೋ ಅಥವಾ ಭಯವಾಗುತ್ತದೆಯೋ? ಅದರಲ್ಲೂ ಮಾನಸಿಕ ಅಸ್ವಸ್ಥನೊಬ್ಬ ಸತ್ತು, ಆತನ ಅಂತ್ಯಸಂಸ್ಕಾರ ಮಾಡಿದ ನಂತರ ಆತ ಎದ್ದು ಬಂದರೆ?! ಇಂತದ್ದೊಂದು ಘಟನೆ ನಿಜಕ್ಕೂ ನಡೆದಿದೆ.

ಮಧ್ಯಪ್ರದೇಶದ ಬರೋಡಾದ ಮಾತಾಜಿ ಮೊಹಲ್ಲಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ದಿಲೀಪ್​ ಹೆಸರಿನ ವ್ಯಕ್ತಿಯೊಬ್ಬ ಕಾಣೆಯಾಗಿದ್ದ. ದಿಲೀಪ್​ ಒಬ್ಬ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಎಲ್ಲಿ ಹೋಗಿದ್ದಾನೆ ಎನ್ನುವುದು ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಇದೇ ಸಮಯಕ್ಕೆ ನಗರದ ಸೇತುವೆ ಬಳಿ ಒಂದು ಅನಾಥ ಶವ ಪತ್ತೆಯಾಗಿದೆ. ಶವದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೊಲೀಸರು, ಮೃತರ ಸಂಬಂಧಿಕರಿಗೆ ಪೊಲೀಸರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಆ ಫೋಟೋವನ್ನು ನೋಡಿದ ದಿಲೀಪ್​ ಕುಟುಂಬ ಪೊಲೀಸರ ಬಳಿ ಓಡಿದ್ದಾರೆ. ಇದು ತಮ್ಮ ಕುಟುಂಬದ ವ್ಯಕ್ತಿಯೇ ಎಂದು ಹೇಳಿ ಶವ ಪಡೆದು, ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಿದ್ದಾರೆ.

ಅಂತ್ಯಸಂಸ್ಕಾರ ಮಾಡಿ ಮುಗಿಸಿ ಕೆಲ ಗಂಟೆಗಳಲ್ಲಿ ಅವರು ಅಂತ್ಯಸಂಸ್ಕಾರ ಮಾಡಿದ್ದ ವ್ಯಕ್ತಿ ಮನೆಗೆ ವಾಪಾಸಗಿದ್ದಾನೆ. ಪೂರ್ತಿ ಕುಟುಂಬ ಗಾಬರಿಯಿಂದ ದಿಲೀಪ್​ರನ್ನು ನೋಡಿದೆ. ನಂತರ ಮತ್ತೆ ಪೊಲೀಸ್​ ಠಾಣೆಗೆ ಓಡಲಾಗಿದೆ.

ಅಂತ್ಯಸಂಸ್ಕಾರವಾದ ವ್ಯಕ್ತಿ ಮತ್ತು ದಿಲೀಪ್​ ನೋಡಲು ಬಹುತೇಕ ಒಂದೇ ರೀತಿ ಇದ್ದಾರೆ. ಅದರಿಂದಾಗಿಯೇ ಈ ತೊಂದರೆಯಾಗಿದೆ. ಇದೀಗ ಮೃತನಾದ ವ್ಯಕ್ತಿಯ ನಿಜವಾದ ಕುಟುಂಬವನ್ನು ಹುಡುಕಲಾಗಿದೆ. ಆತ ಭೆಲಾ ಭೀಮ್ ಲತಿ ಗ್ರಾಮದ ರಾಮ್‌ಕುಮಾರ್ ಆದಿವಾಸಿ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net