ಎಕ್ಸ್​ ಬಾಯ್​ಫ್ರೆಂಡ್ ಮದುವೆಯಾಗುವ ಹುಡುಗಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ ಮಾಜಿ ಲವರ್!

love
Published on

ಅಹಮದಾಬಾದ್: ಮಾಜಿ ಪ್ರಿಯಕರ, ತನ್ನನ್ನು ಬಿಟ್ಟ ಮೇಲೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ ಎನ್ನುವ ಸಿಟ್ಟಿನಿಂದ, ಆ ಯುವತಿಯ ಅಶ್ಲೀಲ ಫೋಟೋಗಳನ್ನು ಮಾಜಿ ಲವರ್​ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

ಇತ್ತೀಚೆಗೆ ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳು. ಇನ್​ಸ್ಟಾಗ್ರಾಂನ ಯಾವುದೋ ನಕಲಿ ಖಾತೆಯಿಂದ ನನ್ನ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಆಕೆ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಈ ಪ್ರಕರಣದ ಆರೋಪಿ ಒಬ್ಬ ಗಂಡಲ್ಲ ಬದಲಾಗಿ ಹೆಣ್ಣು ಎನ್ನುವುದು ತಿಳಿದುಬಂದಿದೆ.

ಫೋಟೋಗಳು ಪೋಸ್ಟ್​ ಆದ ಲೊಕೇಷನ್ ಟ್ರೇಸ್ ಮಾಡಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಮದುವೆಯಾಗಬೇಕಿದ್ದ ಯುವಕನ ಮಾಜಿ ಪ್ರಿಯತಮೆಯೇ ಈ ಕೆಲಸ ಮಾಡಿದ್ದು ಬೆಳಕಿಗೆ ಬಂದಿದೆ. ಆತನ ಇನ್​ಸ್ಟಾಗ್ರಾಂ ಖಾತೆಯ ಯೂಸರ್ ನೇಮ್ ಹಾಗೂ ಪಾಸ್​ವರ್ಡ್ ಆ ಯುವತಿಯ ಬಳಿ ಇತ್ತಂತೆ. ಅದನ್ನು ಬಳಸಿಕೊಂಡು ಅವನ ಖಾತೆಗೆ ಲಾಗ್​ಇನ್ ಆದ ಆಕೆ, ಅದರಲ್ಲಿ ಆತ ಮದುವೆಯಾಗಬೇಕಿದ್ದ ಯುವತಿಯೊಂದಿಗೆ ಮಾಡಿದ್ದ ಚಾಟ್ ಅನ್ನು ನೋಡಿದ್ದಾಳೆ. ಅಲ್ಲಿ ಆಕೆಗೆ ಆ ಯುವತಿಯ ಅಶ್ಲೀಲ ಫೋಟೊಗಳೂ ಸಿಕ್ಕಿವೆ. ಅದನ್ನು ಡೌನ್​ಲೋಡ್ ಮಾಡಿಟ್ಟುಕೊಂಡು, ಫೇಕ್​ ಅಕೌಂಟ್ ಒಂದರ ಮೂಲಕ ಆ ಫೋಟೋಗಳನ್ನು ಪೋಸ್ಟ್​ ಮಾಡಲಾರಂಭಿಸಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವಳು ಬಳಸುತ್ತಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net