ಮೂರು ಮದುವೆ ಆದ ಮಹಿಳೆ; ಪತಿಗೆ ಕೊಟ್ಟಳು ವಿಷ ಬೆರಸಿದ ಜ್ಯೂಸ್​,ಮುಂದೆ ನಡೆದಿದ್ದೇ ಬೇರೆ!

Untitled design - 2023-11-20T161712.278
Published on

ಮಧ್ಯಪ್ರದೇಶ: ಮನೆಗೆ ಬಂದ ಗಂಡನಿಗೆ ತಂಪಾದ ಜ್ಯೂಸ್​ ನೀಡಿದ ಮಹಿಳೆ, ಅದಕ್ಕೆ ವಿಷ ಬೆರಸಿ ಪತಿಯನ್ನು ಹತ್ಯೆಗೈಯಲು ಮುಂದಾದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವರದಿಯಾಗಿದೆ.

ಈ ಹಿಂದೆ ಎರಡು ಮದುವೆಯಾಗಿದ್ದ ಕೋಮಲ್ ಎಂಬ ಮಹಿಳೆ, ಮೋಹಿತ್​ ಶರ್ಮಾ ಎಂಬುವವರನ್ನು ಮದುವೆಯಾಗುವ ಮುಖೇನ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹವಾಗಿ ಕೇವಲ ಐದು ತಿಂಗಳ ಕಳೆದಿದ್ದಷ್ಟೇ ಅಷ್ಟರೊಳಗೆ ಪತಿಗೆ ಕುಡಿಯಲು ಕೊಟ್ಟ ಜ್ಯೂಸ್​ಗೆ ವಿಷ ಬೆರಸಿ ಆತನನ್ನು ಹತ್ಯೆಗೈಯಲು ಸಂಚು ಹೂಡಿದ್ದಾಳೆ.

ಈ ವರ್ಷದ ಜೂನ್‌ನಲ್ಲಿ ಮದುವೆಯಾಗಿದ್ದ ಕೋಮಲ್ ಮತ್ತು ಮೋಹಿತ್ ಶರ್ಮಾ ನಡುವೆ ಯಾವುದೇ ಜಗಳವಿಲ್ಲದೆ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು ಎಂದು ಹೇಳಲಾಗಿದೆ. ನವೆಂಬರ್ 15 ರಂದು ಕೋಮಲ್ ತನ್ನ ಪತಿ ಮೋಹಿತ್‌ಗೆ ತಂಪು ಪಾನೀಯವನ್ನು ನೀಡಿದ್ದು, ಜ್ಯೂಸ್​ನೊಳಗೆ ವಿಷ ಬೆರಸಿ ಗಂಡನಿಗೆ ಕೊಟ್ಟಿದ್ದಾರೆ. ಅನುಮಾನಿಸದ ಪತಿ ವಿಷಪೂರಿತ ಪಾನೀಯ ಸೇವಿಸಿ, ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಅದೃಷ್ಟವಶಾತ್​ ಪ್ರಾಣಪಾಯದಿಂದ ಪಾರಾದ ಮೋಹಿತ್​, ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಡಿಸ್ಚಾರ್ಜ್ ಆದ ಬಳಿಕ ಮೋಹಿತ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿಯನ್ನು ಕೊಲ್ಲುವ ಆಕೆಯ ಹಿಂದಿನ ಪ್ರತ್ಯೇಕ ಕಾರಣ ಏನು ಎಂಬುದು ಸದ್ಯ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net