More

    ರೇಷ್ಮೆಯಂತೆ ಹೊಳೆಯುವ ಕೂದಲಿಗಾಗಿ ಈ ಸಿಂಪಲ್ ಟಿಫ್ಸ್​ ಫಾಲೋ ಮಾಡಿ…

    ಬೆಂಗಳೂರು: ಪ್ರತಿಯೊಬ್ಬ ಮಹಿಳೆಯು ತನ್ನ ಕೂದಲು ರೇಷ್ಮೆಯಂತೆ ಮತ್ತು ಆರೋಗ್ಯಕರವಾಗಿರಬೇಕೆಂದು ಬಯಸುತ್ತಾರೆ. ಕೆಲಸದ ಒತ್ತಡದಿಂದ ಸೌಂದರ್ಯ ಹಾಗೂ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಈ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು,ಕೂದಲು ತೆಳುವಾಗುವುದು, ಕೂದಲುದುರುವಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಾವು ಕೆಲವೊಂದು ಮನೆಮದ್ದುಗಳಿಂದ ನಮ್ಮ ಕೂದಲನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ….

    1) ತಲೆ ಸ್ನಾನ ಮಾಡಿದ ನಂತರ ಎಂದಿಗೂ ಒದ್ದೆತಲೆಯನ್ನು ಬಾಚಬೇಡಿ. ತಲೆ ಸ್ನಾನದ ನಂತರ ಹೇರ್ ಡ್ರೈಯರ್ ನಿಂದ ಕೂದಲನ್ನು ಒಣಗಿಸಬೇಡಿ. ನ್ಯಾಚುರಲ್​ ಆಗಿ ಕೂದಲುಗಳು ಒಣಗಲು ಬಿಡಿ.

    ರೇಷ್ಮೆಯಂತೆ ಹೊಳೆಯುವ ಕೂದಲಿಗಾಗಿ ಈ ಸಿಂಪಲ್ ಟಿಫ್ಸ್​ ಫಾಲೋ ಮಾಡಿ…
    2) ಕನಿಷ್ಟ ವಾರಕ್ಕೆ ಎರಡು ಬಾರಿ ತೆಂಗಿನೆಣ್ಣೆ ಹಾಕಿ ಮಸಾಜ್ ಮಾಡಿ ಉಗುರು ಬೆಚ್ಚಗಿ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಉತ್ತಮವಾದ ಕೂದಲು ನಿಮ್ಮದಾಗುತ್ತದೆ.

    ರೇಷ್ಮೆಯಂತೆ ಹೊಳೆಯುವ ಕೂದಲಿಗಾಗಿ ಈ ಸಿಂಪಲ್ ಟಿಫ್ಸ್​ ಫಾಲೋ ಮಾಡಿ…


    3) ಬೆಳ್ಳುಳ್ಳಿ ಎಸಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಗೆ ಬೆಳ್ಳುಳ್ಳಿ ಎಸಳು ಸೇರಿಸಿ. ತಂಪು ವಾತಾವರಣದಲ್ಲಿ ಹತ್ತು ದಿನ ಜಾರ್ ನಲ್ಲಿ ಸಂಗ್ರಹಿಸಿಡಿ. ನಂತರ ಮತ್ತೆ ಕತ್ತರಿಸಿದ ಬೆಳ್ಳುಳ್ಳಿಯನ್ನು ಬೆಚ್ಚಗಿನ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ನಿಮ್ಮ ಕೂದಲಿಗೆ ಹಾಕಿ ಮಸಾಜ್​ ಮಾಡಿ. ನಂತರ ವಾಶ್ ಮಾಡಿ. ಬೆಳ್ಳುಳ್ಳಿ ಕೂದಲಿನ ಬೆಳವಣಿಗೆ ಉತ್ತೇಜಿಸಲು ಮತ್ತು ಕೂದಲು ಉದುರುವಿಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

    ರೇಷ್ಮೆಯಂತೆ ಹೊಳೆಯುವ ಕೂದಲಿಗಾಗಿ ಈ ಸಿಂಪಲ್ ಟಿಫ್ಸ್​ ಫಾಲೋ ಮಾಡಿ…

    4) ಕರಿಬೇವು, ದಾಸವಾಳ ಹಾಗೂ ಪಾರಿಜಾತ ಹೂವಿನ ಗಿಡದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.

    ರೇಷ್ಮೆಯಂತೆ ಹೊಳೆಯುವ ಕೂದಲಿಗಾಗಿ ಈ ಸಿಂಪಲ್ ಟಿಫ್ಸ್​ ಫಾಲೋ ಮಾಡಿ…
    5) ಕೂದಲಿನ ಬೇರು ಸದೃಢವಾಗಿರಿಸಲು ನಿಮ್ಮ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಸೇರಿಸಿ ಕಿವಿ, ಪೇರಲ, ಕಿತ್ತಳೆ, ಕಪ್ಪು ಹಣ್ಣುಗಳು ಮುಂತಾದ ವಿಟಮಿನ್ ಸಿ ಭರಿತ ಆಹಾರಗಳನ್ನು ಸೇವಿಸಿ. ಇದರೊಂದಿಗೆ ಬೇಳೆಕಾಳುಗಳು, ಮೊಟ್ಟೆಗಳು ಮತ್ತು ಮೀನಿ ನಂತಹ ಪ್ರೋಟಿನ್ ಮೂಲಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಹೀಗೆ ಮಾಡುದರಿಂದ ನಿಮ್ಮ ಕೂದಲುಗಳು ಬೆಳೆಯಲು ಬೇಕಾದ ಪೋಷ್ಟಿಕಾಂಶಗಳನ್ನು ನೀಡುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts