More

    ನಿರೀಕ್ಷೆ ಹೆಚ್ಚಿಸಿದ ‘ಅರವಿಂದ್​-ದಿವ್ಯಾ’ ಜೋಡಿ!; ತೆರೆ ಮೇಲೆ ಮಾಡಲಿದ್ದಾರಾ ಮೋಡಿ?

    ಬೆಂಗಳೂರು: ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಿಂದಲೂ ಹೊಸತನಕ್ಕೆ ಹೆಚ್ಚು ತೆರೆದುಕೊಂಡವರು. ಕನ್ನಡ ಚಿತ್ರರಂಗ ಇನ್ನೂ ಫಿಲ್ಮ್ ಬಳಸಿ ಸಿನಿಮಾ ಮಾಡುತ್ತಿದ್ದಾಗಲೇ ಡಿಜಿಟಲ್ ಫಾರ್ಮ್ಯಾಟಿನಲ್ಲಿ ಸಿನಿಮಾ ರೂಪಿಸಿದವರು. ‘ತುಘ್ಲಕ್’, ‘ನಮ್ ಏರಿಯಾಲ್ ಒಂದಿನ’, ‘ಹುಲಿರಾಯ’ ಮೊದಲಾದ ಚಿತ್ರಗಳು ಅರವಿಂದ್ ಅವರ ವಿಭಿನ್ನ ಚಿಂತನೆಗೆ ಸಾಕ್ಷಿಯಾಗಿದೆ.

    ಇದನ್ನೂ ಓದಿ: 30 ದಿನ ಅನ್ನ ಸೇವಿಸೋದನ್ನ ನಿಲ್ಲಿಸಿದ್ರೆ, ದೇಹದಲ್ಲಿ ಈ ಎಲ್ಲಾ ಬದಲಾವಣೆಗಳು ಕಂಡು ಬರುತ್ತವೆ..!

    ಇದೀಗ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಸಿನಿಮಾ ‘ಅರ್ದಂಬರ್ಧ ಪ್ರೇಮಕಥೆ’ ಸದ್ಯ ಬಿಡುಗಡೆಗೆ ಸಜ್ಜಾಗಿದ್ದು, ಡಿ.01 ರಂದು ತೆರೆಗೆ ಬರಲು ಸಿದ್ಧಗೊಂಡಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿರುವ ಬಿಗ್​ಬಾಸ್​ ಸ್ಪರ್ಧಿಗಳಾದ ಅರವಿಂದ್​ ಕೆ.ಪಿ ಮತ್ತು ದಿವ್ಯಾ ಉರುಡುಗ ಜೋಡಿ ಚಿತ್ರ ಸೆಟ್ಟೇರುವ ಮುನ್ನವೇ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡಿದ್ದರು.

    ದಿವ್ಯಾ-ಅರವಿಂದ್​ ಜೋಡಿ ಅಭಿನಯದ ‘ಅರ್ದಂಬರ್ಧ ಪ್ರೇಮಕಥೆ’ ಚಿತ್ರವು ಸದ್ಯ ಸಿನಿಪ್ರೇಕ್ಷಕರು ಹಾಗೂ ನೆಟ್ಟಿಗರ ಗಮನವನ್ನು ಸೆಳೆಯುತ್ತಿದ್ದು, ಚಿತ್ರತಂಡ ಮಾಡುತ್ತಿರುವ ಪ್ರಚಾರ ಕಾರ್ಯಗಳು ವಿಭಿನ್ನ ಹಾಗೂ ವಿಶೇಷವಾಗಿದೆ. ಸದ್ಯ ಅರವಿಂದ್ ಮತ್ತು ದಿವ್ಯಾ ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿದ್ದು, ಪ್ರತೀ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರನ್ನು ಖುದ್ದು ಭೇಟಿ ಮಾಡಿ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಇದನ್ನೂ ಓದಿ: ಗುಡ್​​ ಮ್ಯಾನರ್ಸ್​ ಇರುವ ಹುಡಗನ ಬ್ಯಾಡ್​​ ಮ್ಯಾನರ್ಸ್​ ಸಿನಿಮಾ ನೋಡಿದೆ: ದರ್ಶನ್​ ತೂಗುದೀಪ  

    ‘ಅರ್ದಂಬರ್ಧ ಪ್ರೇಮಕಥೆ’ ಕೂಡಾ ಪ್ರಯಾಣ ಕಥಾವಸ್ತುವನ್ನು ಹೊಂದಿದ್ದು, ಈಗ ಈ ಚಿತ್ರದ ನಾಯಕ-ನಾಯಕಿ ಕೂಡಾ ಜರ್ನಿಯ ಮುಖಾಂತರ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಬಕ್ಸಸ್ ಮೀಡಿಯಾ, ಆರ್.ಎ.ಸಿ ವಿಷುವಲ್ಸ್ ಮತ್ತು ಲೈಟ್ ಹೌಸ್ ಮೀಡಿಯಾದ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ. ದಿವ್ಯಾ ಮತ್ತು ಅರವಿಂದ್ ಜತೆಗೆ ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ ಬಹುಕಾಲದ ನಂತರ ಬಣ್ಣ ಹಚ್ಚಿದ್ದು, ಚಿತ್ರಕ್ಕೆ ಸೂರ್ಯ ಅವರ ಛಾಯಾಗ್ರಹಣವಿದೆ. ಸ್ವತಃ ಅರವಿಂದ್ ಕೌಶಿಕ್ ಅವರೇ ಸಂಕಲನ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಾಗಿ ಹೆಚ್ಚು ಹೆಸರು ಮಾಡಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಕೇವಲ ತೆರೆ ಮೇಲೆ ಅಲ್ಲ ನಿಜಜೀವನದಲ್ಲೂ ಒಂದಾಗಲಿದೆ ಎಂಬ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಆದ್ರೆ, ಈ ಕುರಿತಂತೆ ಇಬ್ಬರು ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ.

    ‘ಶುಗರ್ ಫ್ಯಾಕ್ಟರಿ’ ಟ್ರೇಲರ್ ರಿಲೀಸ್; ​ಶುಭಕೋರಿದ ನಟ ಪ್ರೇಮ್, ನಿಖಿಲ್ ಕುಮಾರಸ್ವಾಮಿ!

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts