ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೊಟ್ಟ ತಕ್ಷಣವೇ ಮಹಿಳೆ ಸಾವು!

Injection
Published on

ಉತ್ತರಕನ್ನಡ: ಆಸ್ಪತ್ರೆಯೊಂದರಲ್ಲಿ ಇಂಜೆಕ್ಷನ್ ಕೊಟ್ಟ ತಕ್ಷಣವೇ ಮಹಿಳೆಯೊಬ್ಬಳು ಸಾವಿಗೀಡಾಗಿದ್ದು, ಸುತ್ತಮುತ್ತಲ ಪರಿಸರದಲ್ಲಿ ಆತಂಕವನ್ನು ಉಂಟಾಗಿಸಿದೆ. ಉತ್ತರಕನ್ನಡ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಈ ಪ್ರಕರಣ ನಡೆದಿದೆ.

ಕೊಪ್ಪಳ ಮೂಲದ ಸ್ವಪ್ನಾ ರಾಯ್ಕರ್ (32) ಇಂಜೆಕ್ಷನ್​ನಿಂದ ಸಾವಿಗೀಡಾದ ಮಹಿಳೆ. ಕಾರವಾರದ ಹಳಗಾ ಗ್ರಾಮದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವಿವಾಹಿತೆ ಆಗಿದ್ದ ಇವರು ಇಂಜೆಕ್ಷನ್ ಕೊಟ್ಟ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾದರು.

ಈ ಆಸ್ಪತ್ರೆಯಲ್ಲಿ ಪ್ಯಾರಾಲಿಸಿಸ್​ಗೆ ಇಂಜೆಕ್ಷನ್ ನೀಡಲಾಗುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಜನರು ಇಲ್ಲಿಗೆ ಬಂದು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಯಾವುದೇ ಸಮಸ್ಯೆ ಇಲ್ಲದಿದ್ದರೂ ಸ್ವಪ್ನಾ ಇಂಜೆಕ್ಷನ್ ಪಡೆದಿದ್ದರು ಎನ್ನಲಾಗಿದ್ದು, ಸಾವಿಗೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಶವವನ್ನು ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net