ಮಹಿಳೆಯರ 'ಶಕ್ತಿ'ಗೆ ಕಿತ್ತು ಹೋಯ್ತು ಇನ್ನೊಂದು ಬಸ್ ಡೋರ್!

Bus door (1)
Published on

ಮಂಡ್ಯ: ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಜಾರಿಗೆ ಬಂದಿರುವ, ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ 'ಶಕ್ತಿ' ಯೋಜನೆಯಿಂದಾಗಿ ಬಸ್​ ಪ್ರಯಾಣಕ್ಕೆ ನೂಕುನುಗ್ಗಲು ಸೃಷ್ಟಿಯಾಗಿದೆ. ಮೊನ್ನೆಯಷ್ಟೇ ಇಂಥ ನೂಕುನುಗ್ಗಲಿನಿಂದ ಬಸ್​ವೊಂದರ ಡೋರ್ ಕಿತ್ತು ಹೋಗಿದ್ದು, ಇಂದು ಮತ್ತೆ ಅಂಥದ್ದೇ ನೂಕುನುಗ್ಗಲಿನಿಂದಾಗಿ ಮತ್ತೊಂದು ಬಸ್​ನ ಡೋರ್ ಕೂಡ ಕಳಚಿಕೊಂಡಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆಎಸ್​ಆರ್​​ಟಿಸಿ ಬಸ್​ ನಿಲ್ದಾಣದಲ್ಲಿ ಈ ಪ್ರಕರಣ ನಡೆದಿದೆ. ನಿಲ್ದಾಣಕ್ಕೆ ಬಸ್​ ಬಂದಾಗ ಸೀಟು ಹಿಡಿಯುಲು ಉಂಟಾದ ನೂಕುನುಗ್ಗಲಿನಿಂದಾಗಿ ಬಸ್​ ಡೋರ್ ಕಳಚಿಕೊಂಡಿದೆ. ಬಾಗಿಲು ಕಿತ್ತು ಬಂದ ಕಾರಣ ಪ್ರಯಾಣಿಕರನ್ನು ಕೆಳಗಿಳಿಸಿದ ಸಾರಿಗೆ ಸಿಬ್ಬಂದಿ, ಕಿತ್ತು ಹೋದ ಬಾಗಿಲನ್ನು ಟಿಸಿ ಅವರಿಗೆ ಕಂಡಕ್ಟರ್ ಹಸ್ತಾಂತರಿಸಿದ್ದಾರೆ.

ಮೊನ್ನೆ ಕೊಳ್ಳೇಗಾಲದ ಬಸ್​ ನಿಲ್ದಾಣದಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಉಚಿತ ಪ್ರಯಾಣಕ್ಕೆ ಮಹಿಳೆಯರು ಶಕ್ತಿ ಮೀರಿ ಮುಂದಾಗಿದ್ದರಿಂದ ಬಸ್​ ಡೋರ್ ಕಳಚಿ ಹೋಗಿದ್ದು, ಕಂಡಕ್ಟರ್ ಡೋರ್ ಹಿಡಿದುಕೊಂಡು ಪರದಾಡುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು. ಉಚಿತ ಬಸ್ ಪ್ರಯಾಣ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ದಿನವೂ ನಾನಾ ಅವಾಂತರಗಳು ಸೃಷ್ಟಿಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net