ಚಲಿಸುವ ಕಾರಿನ ಮೇಲೆ ಬಿದ್ದ ಜಾಹೀರಾತು ಫಲಕ: ತಾಯಿ-ಮಗಳ ದಾರುಣ ಸಾವು

board
Published on

ಲಕ್ನೋ: ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದು ತಾಯಿ ಮತ್ತು ಮಗಳು ಸಾವಿಗೀಡಾದ ದಾರುಣ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಪ್ರೀತಿ ಜಗ್ಗಿ(38) ಮತ್ತು ಏಂಜಲ್(15) ಮೃತ ದುರ್ದೈವಿಗಳಾಗಿದ್ದು, ಕಾರಿನ ಡ್ರೈವರ್​ ಸರ್ತಾಜ್ ಭೀಕರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಕುರಿತು ಮಾತನಾಡಿದ ಪೊಲೀಸರು, ತಾಯಿ ಹಾಗೂ ಮಗಳು ಮಾಲ್‌ಗೆ ಹೋಗುತ್ತಿದ್ದಾಗ ಏಕಾನಾ ಸ್ಟೇಡಿಯಂ ಹತ್ತಿರದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಏಕಾಏಕಿ ಎಸ್​​ಯುವಿ ಮೇಲೆ ಬಿದ್ದು ಘಟನೆ ಸಂಭವಿಸಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net