More

  ವಾಹನ ಸವಾರರೇ ಎಚ್ಚರ: ಟ್ರಾಫಿಕ್​ ರೂಲ್ಸ್​ ಉಲ್ಲಂಘಿಸಿದ್ರೆ ದಂಡದ ಜತೆ ಕ್ರಿಮಿನಲ್​ ಕೇಸ್ ಸಹ ದಾಖಲಾಗುತ್ತೆ!

  ಬೆಂಗಳೂರು: ವಾಹನ ಸವಾರರಿಗೆ ಟ್ರಾಫಿಕ್​ ಪೊಲೀಸ್​ ಇಲಾಖೆಯಿಂದ ಎಚ್ಚರಿಕೆ ಸಂದೇಶವೊಂದು ಬಂದಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ, ಕೇವಲ ದಂಡ ಮಾತ್ರ ಬೀಳುವುದಿಲ್ಲ. ದಂಡದ ಜತೆಗೆ ಕ್ರಿಮಿನಲ್​ ಕೇಸ್​ ಕೂಡ ದಾಖಲಾಗುತ್ತದೆ.

  ಸೆಕ್ಷನ್​ 283

  ಸಂಚಾರ ನಿಯಮ ಉಲ್ಲಂಘಿಸಿದರೆ ಬರೀ ದಂಡ ಮಾತ್ರ ಹಾಕ್ತಾರೆ ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಒನ್​ ವೇನಲ್ಲಿ ಬರುವುದು ಹಾಗೂ ರಸ್ತೆಯಲ್ಲಿ ವಾಹನ ಪಾರ್ಕ್‌ ಮಾಡುವುದಕ್ಕೆ ಸಂಚಾರಿ ಪೊಲೀಸರು ಕ್ರಿಮಿನಲ್​ ಕೇಸ್​ ದಾಖಲಿಸುತ್ತಿದ್ದಾರೆ. ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಲಾಗುತ್ತಿದೆ.

  ಇದನ್ನೂ ಓದಿ: ಮಕ್ಕಳೆದುರು ಅರೆಬೆತ್ತಲಾಗಿದ್ದ ಪ್ರಕರಣ: ರೆಹನಾ ಫಾತಿಮಾಗೆ ಕೇರಳ ಹೈಕೋರ್ಟ್​ನಿಂದ ಬಿಗ್​ ರಿಲೀಫ್​!

  ಕೋರ್ಟ್​ ಅನುಮತಿ

  ಒಮ್ಮೆ ಎಫ್​ಐಆರ್ ದಾಖಲಾದರೆ ನಿಮ್ಮ ವಾಹನವನ್ನು ಸೀಜ್ ಮಾಡಲಾಗುತ್ತಿದೆ. ಸೀಜ್ ಮಾಡಿದ ವಾಹನ ಬೇಕಾದರೆ, ನ್ಯಾಯಾಲಾಯದ ಅನುಮತಿಯನ್ನು ಪಡೆದೇ ಬಿಡಿಸಿಕೊಳ್ಳಬೇಕು. ಹೀಗಾಗಿ ಸಂಚಾರಿ ನಿಯಮಗಳ ಬಗ್ಗೆ ಎಚ್ಚರದಿಂದ ಇರುವಂತೆ ಟ್ರಾಫಿಕ್​ ಪೊಲೀಸರು ಸಲಹೆ ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದರೆ, ದಂಡ ಮಾತ್ರವಲ್ಲದೆ, ಕ್ರಿಮಿನಲ್ ಕೇಸ್ ಕೂಡ ಬೀಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. (ದಿಗ್ವಿಜಯ ನ್ಯೂಸ್​)

  ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?

  ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ 30 ಕೋಟಿ ರೂ. ನೆರವು ನೀಡಿದ್ರಾ ಕೊಹ್ಲಿ? ಇಲ್ಲಿದೆ ಅಸಲಿ ಸಂಗತಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts